` ವಿಷ್ಣು ಹಬ್ಬಕ್ಕೆ ಸುದೀಪ್ ಗಾಯನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep to sing at vishnu rastriya utsava
Sudeep

ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಲಾಗುತ್ತಿದೆ. ವಿಷ್ಣು ಸೇನಾ ಸಮಿತಿ, ಸೆಪ್ಟೆಂಬರ್ 16,17 ಹಾಗೂ 18ರಂದು 3 ದಿನ ವಿಷ್ಣು ಜಯಂತಿಗಾಗಿ ವಿಶೇಷ, ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ವಿಷ್ಣು ಅವರಿಗಾಗಿಯೇ ವಿಶೇಷ ಹಾಡು ರಚಿಸಲಾಗಿದ್ದು, ಆ ಗೀತೆಯನ್ನು ವಿಷ್ಣು ಅಭಿಮಾನಿಯೂ ಆಗಿರುವ ಕಿಚ್ಚ ಸುದೀಪ್ ಹಾಡುತ್ತಿದ್ದಾರೆ.

ಕೆ. ಕಲ್ಯಾಣ್ ಸಾಹಿತ್ಯ ರಚಿಸಿ, ಸಂಗೀತ ನೀಡಿರುವ ಹಾಡಿನ ರೆಕಾರ್ಡಿಂಗ್, ಹೈದರಾಬಾದ್‍ನಲ್ಲಿ ನಡೆಯಲಿದೆ. ಉತ್ಸವ ಗೀತೆಗೆ ಧ್ವನಿಯಾಗುತ್ತಿರುವುದಷ್ಟೇ ಅಲ್ಲ, ವಿಷ್ಣು ಉತ್ಸವಕ್ಕೆ ಈ ಬಾರಿ ಸುದೀಪ್ ಅವರೇ ಚಾಲನೆ ನೀಡುತ್ತಿದ್ದಾರೆ.