ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಚಿತ್ರಮಂದಿರಗಳಲ್ಲಿ, ಬಾಕ್ಸಾಫೀಸ್‍ನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿ, 25 ದಿನ ಪೂರೈಸಿದೆ. ಟಿ.ಆರ್. ಚಂದ್ರಶೇಖರ್ ನಿರ್ಮಾಣದ ಅಯೋಗ್ಯ ಚಿತ್ರದ ಈ ಸಂಭ್ರಮಾಚರಣೆ ನರ್ತಕಿ ಚಿತ್ರಮಂದಿರದಲ್ಲಿ ನಡೆಯಿತು.
ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ನೀನಾಸಂ ಸತೀಶ್, ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ಎಸ್.ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.