ರಶ್ಮಿಕಾ ಮಂದಣ್ಣ, ಕೊಡಗಿನ ಹುಡುಗಿ. ಸ್ಯಾಂಡಲ್‍ವುಡ್‍ನಲ್ಲಿ ಆಕೆ ನಟಿಸಿರುವ ಮೂರೂ ಚಿತ್ರಗಳು ಹಿಟ್. ತೆಲುಗಿನಲ್ಲಿಯೂ ಅಷ್ಟೆ. ನಟಿಸಿದ ಚಿತ್ರಗಳೆಲ್ಲ ಹಿಟ್. ಇತ್ತೀಚೆಗೆ ಬಿಡುಗಡೆಯಾದ ಗೀತಗೋವಿಂದಂ ಸಿನಿಮಾ, 100 ಕೋಟಿ ಕ್ಲಬ್ ಸೇರಿದೆ. ತೆಲುಗು ಚೆನ್ನಾಗಿಯೇ ಮಾತನಾಡುವ ರಶ್ಮಿಕಾ, ಇತ್ತೀಚೆಗೆ ಚಾನೆಲ್‍ವೊಂದರ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಹೋಗಿದ್ದರು. ಆ ವೇಳೆ, ಶಿವಮೊಗ್ಗದ ಹುಡುಗಿಯೊಬ್ಬಳ ನೃತ್ಯ ಅದ್ಬುತವಾಗಿತ್ತು.
ಆ ಪುಟಾಣಿಯ ನೃತ್ಯಕ್ಕೆ ಎಲ್ಲರೂ ಬೆರಗಾದಾಗ, ನಿರೂಪಕರು, ಆ ಹುಡುಗಿಯ ಊರು ಯಾವುದು ಕೇಳಿ ಎಂದು ರಶ್ಮಿಕಾಗೇ ಹೇಳಿದರು. ಆಗ, ಆ ಬಾಲಕಿ ಮಹಾಲಕ್ಷ್ಮಿ, ಸೊರಬ ತಾಲೂಕಿನ ಹುಡುಗಿ ಎಂದು ಗೊತ್ತಾಯ್ತು. ಆಗ, ತಾನು ಕೊಡಗಿನವಳು ಎಂದು ಹೆಮ್ಮೆಯಿಂದ ಹೇಳಿಕೊಂಡರು ರಶ್ಮಿಕಾ.