` ಹುಚ್ಚ ವೆಂಕಟ್‍ಗೆ ಪೊಲೀಸ್ ವಾರ್ನಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
police warns hechcha venkat
Huccha Venkat

ಇನ್ನೊಮ್ಮೆ ಇದೇ ರೀತಿ ಪುನರಾವರ್ತನೆಯಾದರೆ ಹುಷಾರ್ ಎಂದು ಪೊಲೀಸರು ಹುಚ್ಚ ವೆಂಕಟ್‍ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಗುರುವಾರ ಬೆಳಗ್ಗೆ ಉಲ್ಲಾಳುವಿನಲ್ಲಿರುವ ಬೇಕರಿಯೊಂದಕ್ಕೆ ಹೋಗಿದ್ದ ಹುಚ್ಚ ವೆಂಕಟ್, ಹುಚ್ಚನಂತೆಯೇ ಬೇಕರಿಯಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ವಿಡಿಯೋ ಮಾಡಿಕೊಂಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹುಚ್ಚ ವೆಂಕಟ್‍ನನ್ನು ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಹುಚ್ಚ ವೆಂಕಟ್‍ನಿಂದ ಹಲ್ಲೆಗೊಳಗಾದ ಬೇಕರಿಯವರೇ, ಹೋಗಲಿ ಬಿಡಿ ಸಾರ್, ಒಂದು ವಾರ್ನಿಂಗ್ ಕೊಟ್ಟು ಬಿಟ್ಟುಬಿಡಿ ಎಂದು ಹೇಳಿದ ಕಾರಣ, ಎನ್‍ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು, ಈ ಬಾರಿ ಕೇವಲ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

Padarasa Movie Gallery

Kumari 21 Movie Gallery