` 8ಎಂಎಂ ಕೊಟ್ಟ ಥ್ರಿಲ್ಲೇ ಬೇರೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh is proud about 8mm
Jaggesh Image

ಜಗ್ಗೇಶ್ ಕೈಲಿ ರಿವಾಲ್ವರು, ಗಡ್ಡ, ರಗಡ್ ಲುಕ್ಕು. ಎಲ್ಲಕ್ಕಿಂತ ಮಿಗಿಲಾಗಿ ನೆಗೆಟಿವ್ ಶೇಡ್ ಇರುವ ಪಾತ್ರ. ಇಂಥಾದ್ದೊಂದು ಪಾತ್ರವನ್ನು ನಾನೂ ಕಾಯುತ್ತಿದ್ದೆ. ಹರಿ ಕೂಡಾ ಒಂದು ಅಳುಕಿನಲ್ಲೇ ಬಂದು ಕಥೆ ಹೇಳಿದರು. ಕಥೆ ಇಷ್ಟವಾಯ್ತು. ಸಿನಿಮಾ ಎಂದ ಮೇಲೆ ಒಬ್ಬ ನಾಯಕಿ-ನಾಯಕ ಇರಬೇಕು ಅನ್ನೋ ಕಾನ್ಸೆಪ್ಟನ್ನೇ ಹರಿ ಬ್ರೇಕ್ ಮಾಡಿದ್ದಾರೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ಜಗ್ಗೇಶ್.

ಚಿತ್ರದ ಆಡಿಯೊ ರಿಲೀಸ್ ಆಗಿದೆ. ಚಿತ್ರದ ನನ್ನ ಲುಕ್ ನೋಡಿ ಹೆಂಡತಿಯೂ ಖುಷಿಯಾಗಿದ್ದಾಳೆ. ಬಹುಶಃ, ಇನ್ನು  ಮುಂದೆ ಜಗ್ಗೇಶ್ ಹೀರೋಯಿನ್ ಇಲ್ಲದ ಚಿತ್ರಗಳಲ್ಲೇ ನಟಿಸುತ್ತಾರೆ ಎಂದು ಖುಷಿಯಾಗಿರಬೇಕು ಎಂದು ತಮ್ಮದೇ ಶೈಲಿಯಲ್ಲಿ ಕಿಚಾಯಿಸಿದ ಜಗ್ಗೇಶ್, ಈ ಪಾತ್ರ ನನ್ನ ಮಕ್ಕಳಿಗೂ ಇಷ್ಟವಾಗಿದೆ. ಒಟ್ಟಿನಲ್ಲಿ 8ಎಂಎಂ ನನ್ನ ವೃತ್ತಿಜೀವನಕ್ಕೆ ಬೇಕಾದ ಚೇಂಜ್ ಓವರ್ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

Yajamana Movie Gallery

Bazaar Movie Gallery