Print 
anish tejeshwar prashanth rajappa,

User Rating: 0 / 5

Star inactiveStar inactiveStar inactiveStar inactiveStar inactive
 
prashanth rajppa to direct anish
Prashanth Rajappa, Anish Tejeshwar

ವಾಸು ನಾನ್ ಪಕ್ಕಾ ಕಮಷಿಯಲ್ ಚಿತ್ರದ ಮೂಲಕ ಗಮನ ಸೆಳೆದಿದ್ದ ಅನೀಶ್ ತೇಜೇಶ್ವರ್, ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಈ ಹೊಸ ಸಿನಿಮಾಗೆ ಡೈರೆಕ್ಟರ್ ಪ್ರಶಾಂತ್ ರಾಜಪ್ಪ. ವಿಕ್ಟರಿ, ರನ್ನ, ಅಧ್ಯಕ್ಷದಂತಹಾ ಸೂಪರ್ ಹಿಟ್ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಡೈಲಾಗ್ ಸ್ಟಾರ್. ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ.

ಇದು ಹಾಸ್ಯದ ತೇರಿನ ಮೇಲೆ ಸಾಗುವ ರೊಮ್ಯಾಂಟಿಕ್ ಲವ್‍ಸ್ಟೋರಿ. ನಿಮಗೆ ರವಿಚಂದ್ರನ್ ಸಿನಿಮಾ ನೋಡಿದ ಅನುಭವವಾಗುತ್ತೆ. ನಾಯಕಿಯ ಹುಡುಕಾಟದಲ್ಲಿದ್ದೇವೆ. 2 ತಿಂಗಳ ನಂತರ ಶೂಟಿಂಗ್ ಶುರು ಎಂದು ವಿವರ ನೀಡಿದ್ದಾರೆ ಪ್ರಶಾಂತ್ ರಾಜಪ್ಪ.

ಗಣೇಶ ಹಬ್ಬದ ದಿನ ಹೊಸ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಅದೇ ದಿನ ಚಿತ್ರದ ಟೈಟಲ್ ಕೂಡಾ ಗೊತ್ತಾಗಲಿದೆ.