` ಕನ್ನಡ್ ಗೊತ್ತಿಲ್ಲ ಹರಿಪ್ರಿಯಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
haripriya's new movie is kannad gotilla
Haripriya

ಎಷ್ಟ್ ಚೆಂದ ಕನ್ನಡ ಮಾತಾಡ್ತಾರೆ. ಯಾರ್ರೀ ಹೇಳಿದ್ದು, ಹರಿಪ್ರಿಯಾಗೆ ಕನ್ನಡ ಗೊತ್ತಿಲ್ಲ ಅಂತಾ ಕೇಳ್ಬೇಡಿ. ಇದು ಹರಿಪ್ರಿಯಾ ಅಭಿನಯದ ಹೊಸ ಕನ್ನಡ ಚಿತ್ರದ ಟೈಟಲ್. ಕನ್ನಡ್ ಗೊತ್ತಿಲ್ಲ.

ಆರ್‍ಜೆ ಮಯೂರ್ ರಾಘವೇಂದ್ರ ನಿರ್ದೇಶನದ ಹಾರರ್ ಚಿತ್ರಕ್ಕೆ ಕನ್ನಡ್ ಗೊತ್ತಿಲ್ಲ ಅನ್ನೋ ಹೆಸರಿಡಲಾಗಿದೆ. ಕನ್ನಡ್ ಗೊತ್ತಿಲ್ಲ ಅನ್ನೋದು ಸಾಮಾನ್ಯವಾಗಿ ಬೆಂಗಳೂರಿನಲ್ಲಷ್ಟೇ ಕೇಳಿ ಬರೋ ಡೈಲಾಗು. ಬೆಂಗಳೂರಿನಲ್ಲೇ ಎಷ್ಟೋ ವರ್ಷಗಳಿಂದ ಇರುವವರೂ ಕೂಡಾ ಏನಾದರೂ ಕೇಳಿದ್ರೆ, ಕನ್ನಡ್ ಗೊತ್ತಿಲ್ಲ ಅಂತಾ ಸ್ಟೈಲಾಗಿ ಸ್ಮೈಲ್ ಕೊಡ್ತಾರೆ. ಹಾರರ್ ಕಥೆಗೂ, ಈ ಟೈಟಲ್‍ಗೂ ಏನ್ ಸಂಬಂಧ ಅನ್ನೋವ್ರು ಸಿನಿಮಾ ಬರೋವರೆಗೂ ಕಾಯ್ಬೇಕು. 

ಚಿತ್ರದ ಟೈಟಲ್ ಕೇಳಿ ಕುತೂಹಲ ಹೆಚ್ಚಿತು. ಕಥೆ ಕೇಳಿದೆ. ಸ್ಕ್ರಿಪ್ಟ್ ಥ್ರಿಲ್ ಕೊಟ್ಟಿತು. ಪಾತ್ರಗಳನ್ನು ಸಂಯೋಜಿಸಿರುವ ರೀತಿಯೇ ಅದ್ಭುತ. ಕನ್ನಡ ಬಂದರೂ ಕನ್ನಡ ಮಾತನಾಡದೇ ಇರುವವರು, ಕನ್ನಡ ಗೊತ್ತಿಲ್ಲದಿದ್ದರೂ, ಕನ್ನಡ ಮಾತನಾಡೋಕೆ ಪ್ರಯತ್ನಿಸುವವರು, ಇಲ್ಲಿ ಸಂಪಾದನೆ ಮಾಡಿ ಮತ್ತೆ ತಮ್ಮ ಊರಿಗೆ ವಾಪಸ್ ಆಗುವ ಯೋಚನೆಯಲ್ಲಿರುವ ವಲಸಿಗರ ಸುತ್ತಲೇ ಕಥೆ ಸಾಗುತ್ತೆ ಎಂದು ವಿವರ ಕೊಟ್ಟಿದ್ದಾರೆ ಹರಿಪ್ರಿಯಾ.

2018, ಹರಿಪ್ರಿಯಾ ಪಾಲಿಗೆ ಸಂಭ್ರಮದ ವರ್ಷ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಾಗಲೇ ಹರಿಪ್ರಿಯಾ ಅಭಿನಯದ 4 ಚಿತ್ರಗಳು ಬಿಡುಗಡೆಯಾಗಿದ್ದರೆ, 5 ಕ್ಯೂನಲ್ಲಿವೆ. ಈಗ ಆ ಕ್ಯೂಗೆ ಹೊಸ ಸಿನಿಮಾ ಸೇರ್ಪಡೆಗೊಂಡಿದೆ.

Gara Gallery

Rightbanner02_butterfly_inside

Paddehuli Movie Gallery