` ಕನ್ನಡ ಕಲಿತ್ರೇನೇ ಮರ್ಯಾದೆ.. ಶಿವಣ್ಣ ಹಾಡು ವೈರಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tarakasura kannada akaliyo song is hit
Tarakasura Song

ತಾರಕಾಸುರ ಚಿತ್ರಕ್ಕೆ ಶಿವರಾಜ್‍ಕುಮಾರ್ ಒಂದು ಹಾಡು ಹಾಡಿದ್ದರು. ಚಿತ್ರತಂಡ ರಿಲೀಸ್ ಮಾಡಿದ ಮೊದಲ ಹಾಡು ಅದೇ ಆಗಿತ್ತು. ಈಗ ಆ ಹಾಡು ವೈರಲ್ ಆಗಿದೆ. ಹಾಡು ವೈರಲ್ ಆಗೋಕೆ ಕಾರಣ, ಹಾಡಿನಲ್ಲಿರೋ ಸಾಹಿತ್ಯ. ಕನ್ನಡ ಕಲಿಯೋ.. ಕಲಿಯೋ ಮುಂಡೇದೇ.. ಕುತ್ಕೊಂಡ್ ತಿಂದ್ಕೊಂಡ್ ಇದ್ಮೇಲೆ ಬಾಷೆ ಕಲಿತ್ರೆ ಮರ್ಯಾದೆ.. ಹೀಗೆ ಶುರುವಾಗುವ ಗೀತೆ, ಕರ್ನಾಟಕದಲ್ಲಿದ್ದೂ ಕನ್ನಡ ಕಲಿಯದೇ ಬದುಕುತ್ತಿರುವವರಿಗೆ ಚಾಟಿಯಲ್ಲಿ ಬೀಸಿದಂತಿದೆ. ಹೀಗಾಗಿಯೇ ಹಾಡು ವೈರಲ್ ಆಗೋಕೆ ಶುರುವಾಗಿದೆ.

ಕರ್ನಾಟಕದಲ್ಲಿದ್ದೂ, ಕರ್ನಾಟಕದ ಸವಲತ್ತುಗಳನ್ನು ಪಡೆದೂ ಕೂಡಾ ಕನ್ನಡ ಕಲಿಯದವರ ಬಗ್ಗೆ ಇರೋ ಹಾಡಿದು. ಹಾಡು ಕೇಳಿದ ಪ್ರತಿಯೊಬ್ಬರಿಗೂ ಧನ್ಯವಾದ. ಈ ಹಾಡನ್ನು ನಾನು ಹಾಡಿದ್ದೇನೆ ಎನ್ನುವುದೇ ನನಗೊಂದು ಹೆಮ್ಮೆ ಎಂದಿದ್ದಾರೆ ಶಿವರಾಜ್‍ಕುಮಾರ್.

ಇದು ಯಾರನ್ನೋ ಟಾರ್ಗೆಟ್ ಮಾಡಿರುವ ಹಾಡಲ್ಲ. ಕರುನಾಡಿನಲ್ಲಿದ್ದೂ ಕನ್ನಡ ಕಲಿಯದವರ, ಕನ್ನಡದ ಮೇಲೆ ಅಭಿಮಾನ ಬೆಳೆಸಿಕೊಳ್ಳದವರ ಕುರಿತಾದ ಹಾಡು. ಶಿವಣ್ಣ ಹಾಡಿದ ಕಾರಣ, ಹಾಡಿಗೆ ಇನ್ನಷ್ಟು ಬಲ ಬಂದಿದೆ ಅಂತಾರೆ ತಾರಕಾಸುರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ.

ವೈಭವ್ ನಾಯಕರಾಗಿರುವ ಚಿತ್ರಕ್ಕೆ ಧರ್ಮ ವಿಶ್ ಸಂಗೀತವಿದೆ. ನರಸಿಂಹಲು ಚಿತ್ರದ ನಿರ್ಮಾಪಕರು. ಚಿತ್ರದ ಬಿಡುಗಡೆಗೆ ಚಿತ್ರತಂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

Adachanege Kshamisi Teaser Launch Gallery

Mataash Movie Gallery