` ಕೋಟಿಗೊಬ್ಬ ನಿರ್ದೇಶಕನ ಕೋಟಿಯಂತ ಮಾತು. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kotigobba 3 teaser is super hit
Kotigobba 3 Teaser

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರದ ಟೀಸರ್, ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿಸಿದೆ. ದಾಖಲೆ ಬರೆಯುತ್ತಿದೆ. 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವ ಚಿತ್ರದ ಟೀಸರ್, ಹಾಲಿವುಡ್ ಸಿನಿಮಾ ಸ್ಟೈಲ್‍ನಲ್ಲಿದೆ. ಅದ್ಭುತ ಮೇಕಿಂಗ್, ಕ್ಲಾಸಿಕ್ ಸ್ಟೈಲ್, ಮಾಸ್ ಲುಕ್ ಎಲ್ಲವೂ ಇರುವ ಚಿತ್ರದ ಟೀಸರ್, ಅಭಿಮಾನಿಗಳಿಗಂತೂ ಇಷ್ಟವಾಗಿಬಿಟ್ಟಿದೆ.

ಸುದೀಪ್ ಜೊತೆ ಸಿನಿಮಾ ಮಾಡೋದು ಅಂದ್ರೆ, ರಜನಿ, ಕಮಲ್ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವವಾಗುತ್ತೆ. ನಾನು ಸುದೀಪ್ ಅವರಲ್ಲಿ ಮತ್ತೊಬ್ಬ ರಜನಿಯವರನ್ನು ಕಾಣುತ್ತಿದ್ದೇನೆ ಎಂದು ಥ್ರಿಲ್ ಆಗಿದ್ದಾರೆ ನಿರ್ದೇಶಕ ಶಿವಕಾರ್ತಿಕ್.

ಈ ಮೊದಲು ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್, ರವಿಚಂದ್ರನ್.. ಬೇರೆ ಭಾಷೆಯ ಚಿತ್ರರಂಗದಲ್ಲೂ ನಿರೀಕ್ಷೆ ಹುಟ್ಟಿಸಿದ್ದರು. ಅವರ ಸಿನಿಮಾಗಳನ್ನು ಬೇರೆ ಚಿತ್ರರಂಗದ ದಿಗ್ಗಜರು ಬೆಂಗಳೂರಿಗೆ ಬಂದು ನೋಡುತ್ತಿದ್ದರು. ಕನ್ನಡ ಚಿತ್ರರಂಗದ ತಾಕತ್ತು, ಕೋಟಿಗೊಬ್ಬ-3 ಚಿತ್ರದ ಮೂಲಕ ಗೊತ್ತಾಗಬೇಕು ಎಂದಿದ್ದಾರೆ ಶಿವಕಾರ್ತಿಕ್.

Padarasa Movie Gallery

Kumari 21 Movie Gallery