ಪ್ರಜ್ವಲ್ ದೇವರಾಜ್ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ನಟಿಸುತ್ತಿರೋದು ಹಳೆಯ ಸುದ್ದಿ. ಅದು ಶಿವರಾಜ್ ಕುಮಾರ್-ದಿನೇಶ್ ಬಾಬು ಕಾಂಬಿನೇಷನ್ನಲ್ಲಿ ಹಿಟ್ ಆಗಿದ್ದ ಚಿತ್ರದ ಟೈಟಲ್. ಈ ಚಿತ್ರದಲ್ಲಿ ರಮೇಶ್ ಅರವಿಂದ್ ನೆಗೆಟಿವ್ ರೋಲ್ನಲ್ಲಿ ನಟಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ನಟರಾಗಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ವಿಶೇಷ ಇಟ್ಟುಕೊಂಡಿರೋ ಈ ಚಿತ್ರದ ಮೂಲಕ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಮದ್ರನ್ ಬೆಳ್ಳಿತೆರೆಗೆ ಬರುತ್ತಿದ್ದಾರೆ.
ರಾಗಿಣಿ ಚಂದ್ರನ್, ಪ್ರಜ್ವಲ್ಗೆ ಹೀರೋಯಿನ್ ಆಗಿಯೇನೂ ಬರ್ತಿಲ್ಲ. ಮೂಲತಃ ಮಾಡೆಲ್ ಹಾಗೂ ನಾಟ್ಯ ಕಲಾವಿದೆಯಾಗಿರುವ ರಾಗಿಣಿ ಚಮದ್ರನ್, ಚಿತ್ರದಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರಂತೆ. ರಾಗಿಣಿ ಚಂದ್ರನ್ಗೆ ಕ್ಯಾಮೆರಾ ಹೊಸದಲ್ಲ. ಹಲವಾರು ಜಾಹೀರಾತುಗಳಲ್ಲಿ ನಟಿಸಿರುವ ರಾಗಿಣಿಗೆ ವೃತ್ತಿಪರ ಡ್ಯಾನ್ಸರ್. ಶಾರ್ಟ್ ಫಿಲಂಗಳಲ್ಲಿ ನಟಿಸಿರುವ ರಾಗಿಣಿ ಚಂದ್ರನ್ಗೆ, ನರಸಿಂಹ ನಿರ್ದೇಶನದ ಈ ಚಿತ್ರ, ಬೆಳ್ಳಿತೆರೆಯಲ್ಲಿ ಮೊದಲ ಸಿನಿಮಾ.