` ತಲೆಯಲ್ಲಿ ಕೂದಲಿಲ್ಲ ಅಂದ್ಕೊಂಡ್ರೆ.. ಮೆದುಳಲ್ಲಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mahira first look out
Mahira First Look

ಮಹಿರಾ. ಇದು ರಾಜ್ ಬಿ ಶೆಟ್ಟಿ ನಟಿಸಿರುವ ಸಿನಿಮಾ. ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ, ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರ ಮಾಡಿದ್ದಾರೆ. ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದೆ. ಟೀಸರ್‍ನಲ್ಲಿರೋದು ಒಂದು ಬ್ಯಾಕ್‍ಗ್ರೌಂಡ್ ಮ್ಯೂಸಿಕ್. ರಿವಾಲ್ವರ್ ಹಿಡಿದುರುವ ರಾಜ್ ಬಿ ಶೆಟ್ಟಿ ಹಾಗೂ ತಲೇ ಮೇಲ್ ಕೂದಲಿಲ್ಲ ಅಂದ್ರೆ, ತಲೆ ಒಳಗೆ ಬುದ್ದಿನೂ ಇಲ್ಲ ಅಂತಾನಾ.. ಅನ್ನೋ ಡೈಲಾಗ್.

ಮಹೇಶ್ ಗೌಡ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ, ಮಗಳನ್ನು ರಕ್ಷಿಸಿಕೊಳ್ಳುವ ತಾಯಿಯ ಕಥೆಯನ್ನು ಹೊಂದಿದೆ. ತಾಯಿ-ಮಗಳ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಬೆಳವಣಿಗೆಗಳು, ಮಗಳಿಗೆ ಶುರುವಾಗುವ ಆತಂಕ, ಮಗಳನ್ನು ರಕ್ಷಿಸಿಕೊಳ್ಳಲು ತಾಯಿ ನಡೆಸುವ ಹೋರಾಟವೇ ಚಿತ್ರದ ಕಥೆ. ಹೀಗಾಗಿಯೇ ಮಹಿರ ಎಂದು ಹೆಸರಿಡಲಾಗಿದೆ. ಮಹಿರ ಎಂದರೆ ಬಲಿಷ್ಠ ಮಹಿಳೆ ಎಂದರ್ಥ. ರಾಜ್ ಬಿ ಶೆಟ್ಟಿ ಅವರದ್ದು, ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ.k

Padarasa Movie Gallery

Kumari 21 Movie Gallery