ಕಿರಾತಕ. ಯಶ್ ಸಿನಿ ಜರ್ನಿಯ ಸೂಪರ್ ಹಿಟ್ ಸಿನಿಮಾ. ಈಗ ಅದೇ ಚಿತ್ರದ ಸೀಕ್ವೆಲ್ ರೆಡಿಯಾಗುತ್ತಿದೆ. ಕಿರಾತಕದಲ್ಲಿ ಪಕ್ಕಾ ಮಂಡ್ಯ ಸ್ಟೈಲ್ನಲ್ಲಿ ಕಿರಿಕ್ ಮಾಡುತ್ತಿದ್ದ ಯಶ್, ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ಸಿಟಿ ಗೆಟಪ್ನಲ್ಲಿರ್ತಾರೆ. ಹಳೇ ಕಿರಾತಕದಲ್ಲಿ ಶರಟು, ಲುಂಗಿ, ಹೆಗಲ ಮೇಲೊಂದು ಕೆಂಪು ವಸ್ತ್ರ ಹಾಕಿಕೊಂಡೇ ಮೋಡಿ ಮಾಡಿದ್ದ ಯಶ್, ಹೊಸ ಕಿರಾತಕನಾಗಿ ಬೇರೆಯೇ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಳಿ ಪಂಚೆ, ಕಲರ್ ಕಲರ್ ಶರಟು, ಕಣ್ಣಿಗೆ ಕೂಲಿಂಗ್ ಗ್ಲಾಸು.. ಥೇಟು ಅಣ್ತಮ್ಮ ಸ್ಟೈಲು. ಅನಿಲ್ ನಿರ್ದೇಶನದ ಮೈ ನೇಮ್ ಈಸ್ ಕಿರಾತಕ ಚಿತ್ರ, ಬಿರುಸಿನಿಂದ ಚಿತ್ರೀಕರಣ ಆರಂಭಿಸಿದೆ.