Print 
cricket tournament kcc 2,

User Rating: 0 / 5

Star inactiveStar inactiveStar inactiveStar inactiveStar inactive
 
cc 2 turnament tickets available
KCC 2

ಕಿಚ್ಚ ಸುದೀಪ್ ಬಹಳ ಅಸ್ಥೆ ವಹಿಸಿ ಆರಂಭಿಸಿದ ಕ್ರಿಕೆಟ್ ಟೂರ್ನಿ ಇದು. ಚಿತ್ರರಂಗದ ಸ್ಟಾರ್‍ಗಳನ್ನೆಲ್ಲ ಒಗ್ಗೂಡಿಸಿ ನಡೆಯುತ್ತಿರುವ ಈ ಕ್ರಿಕೆಟ್ ಟೂರ್ನಮೆಂಟ್, ಈ ಬಾರಿ ಅದ್ಧೂರಿಯಾಗಿದೆ. ಈ ಟೂರ್ನಿಗೆ ಸೆಹ್ವಾಗ್, ಗಿಬ್ಸ್‍ರಂತಹ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಗಳೂ ಮೆರುಗು ತುಂಬುತ್ತಿದ್ದಾರೆ. ಸೆಪ್ಟೆಂಬರ್ 8ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ತಮಿಳು, ತೆಲುಗು ಚಿತ್ರರಂಗದವರು ಕೂಡಾ ಸೇರಿದಂತೆ ಹಲವು ಗಣ್ಯಾತಿಗಣ್ಯರು ಆ ದಿನ ಟೂರ್ನಿಗೆ ಮೆರುಗು ತುಂಬಲಿದ್ದಾರೆ.

ಮ್ಯಾಚ್ ನೋಡಲು ಬಯಸುವವರಿಗೆ ಸೋಮವಾರದಿಂದಲೇ ಟಿಕೆಟ್ ಹಂಚಿಕೆ ಶುರುವಾಗಲಿದೆ. ಎರಡೂ ದಿನಕ್ಕೆ 50-500 ರೂ. ಟಿಕೆಟ್ ರೇಟ್ ಇರುತ್ತೆ. ಕಲರ್ಸ್ ಸೂಪರ್ಸ್‍ನಲ್ಲಿ ಲೈವ್ ಕೂಡಾ ಇರುತ್ತೆ. 5ನೇ ತಾರೀಕಿನಿಂದ ಎಲ್ಲ ಅಂತಾರಾಷ್ಟ್ರೀಯ ಆಟಗಾರರು ಚಿನ್ನಸ್ವಾಮಿಯಲ್ಲಿ ಚಿತ್ರತಾರೆಯರೊಂದಿಗೆ ಅಭ್ಯಾಸ ನಡೆಸಲಿದ್ದಾರೆ.

ಇದು ಆರಂಭವಾಗಿದ್ದು ನನ್ನಿಂದಲೇ ಆದರೂ, ಈಗಿನ ಯಶಸ್ಸಿಗೆ ಇಡೀ ಚಿತ್ರರಂಗದ ಬೆಂಬಲ ಕಾರಣ ಎಂದಿದ್ದಾರೆ ಕಿಚ್ಚ ಸುದೀಪ್. ಸುದ್ದಿಗೋಷ್ಟಿಯಲ್ಲಿದ್ದ ಶಿವರಾಜ್‍ಕುಮಾರ್, ಸುದೀಪ್ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅವರು ಎಲ್ಲಿಗೆ ಕರೆದರೂ ಹೋಗುತ್ತೇನೆ ಎಂದರು. 

ಕೆಸಿಸಿ ಉದ್ಘಾಟನೆಗೆ ರಾಜಕಾರಣಿಗಳು, ಇಡೀ ಕನ್ನಡ ಚಿತ್ರರಂಗ ಕೂಡಾ ಆಗಮಿಸುತ್ತಿದೆ. ಆ ದಿನ ಕಲಾವಿದರು ಕೊಡಗು ಸಂತ್ರಸ್ತರ ಸಹಾಯಕ್ಕಾಗಿ ದೇಣಿಗೆಯನ್ನೂ ನೀಡಲಿದ್ದಾರೆ.