ಟೈಗರ್ ಪ್ರಭಾಕರ್ ಅವರ ಪುತ್ರ, ವಿನೋದ್ ಪ್ರಭಾಕರ್ ಮನೆಗೆ ಹೊಸ ಕಾರು ಬಂದಿದೆ. ಅದ್ದೂರಿ ಐಷಾರಾಮಿ ಕಾರು. ಆಡಿ ಕ್ಯೂ7. ಕಡುನೀಲಿ ಬಣ್ಣದ ಆಡಿ ಕಾರ್ನೊಂದಿಗೆ ವಿನೋದ್ ಪ್ರಭಾಕರ್ ಐಷಾರಾಮಿ ಕಾರೊಂದರ ಒಡೆಯರಾಗಿದ್ದಾರೆ.
ತಮ್ಮ ಮನೆಗೆ ಬಂದ ಹೊಸ ಕಾರಿನ ಜೊತೆ ಪತ್ನಿಯ ಜೊತೆ ಫೋಟೋ ತೆಗೆಸಿಕೊಂಡಿರುವ ವಿನೋದ್ ಪ್ರಭಾಕರ್, ಹೊಸ ಕಾರ್ನ್ನು ಸ್ವಾಗತಿಸಿದ್ದಾರೆ.