` ಎಸ್.ನಾರಾಯಣ್‍ಗೆ 43 ಲಕ್ಷ ನಾಮ ಹಾಕಿದ್ದ ಜ್ಯೋತಿಷಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
director s narayan cheated by astrologer
S Narayan

ಎಸ್. ನಾರಾಯಣ್. ಕಲಾ ಸಾಮ್ರಾಟ್ ಎಂದೇ ಹೆಸರಾಗಿರುವ ನಟ, ನಿರ್ದೇಶಕ, ನಿರ್ಮಾಪಕ. ಸಿನಿಮಾಗಳಲ್ಲಿ ಟೋಪಿ ಹಾಕುವ, ಬುದ್ದಿ ಹೇಳುವ ಪಾತ್ರಗಳಲ್ಲಿ ನಟಿಸುತ್ತಿದ್ದ ನಾರಾಯಣ್‍ಗೆ ರಿಯಲ್ ಲೈಫಲ್ಲಿ ಜ್ಯೋತಿಷಿ ಗ್ಯಾಂಗೊಂದು ನಾಮ ಹಾಕಿದೆ. 

ಕಳೆದ ವರ್ಷ ಎಸ್. ನಾರಾಯಣ್ ಅವರಿಗೆ ತುರ್ತಾಗಿ ಹಣ ಬೇಕಿತ್ತು. ಆಂಧ್ರ ಬ್ಯಾಂಕ್‍ನಲ್ಲಿ ಸಾಲಕ್ಕೆ ಪ್ರಯತ್ನಿಸಿದ್ದರು ನಾರಾಯಣ್. ಆ ವೇಳೆಯಲ್ಲೇ ಈ ಖದೀಮರ ಗ್ಯಾಂಗ್‍ನ ಒಬ್ಬ ನಾರಾಯಣ್‍ರನ್ನು ಭೇಟಿ ಮಾಡಿ, ತಾನು ತಿರುನಲ್ವೇಲಿಯ ಫೈನಾನ್ಷಿಯರ್ ಕಡೆಯವನು ಎಂದು ಪರಿಚಯಿಸಿಕೊಂಡ. ನಾಲ್ಕೇ ದಿನಗಳಲ್ಲಿ ಸಾಲ ಕೊಡಿಸುತ್ತೇನೆ. ನನಗೆ 1% ಕಮಿಷನ್ ಕೊಡಬೇಕು ಎಂದು ಡಿಮ್ಯಾಂಡ್ ಇಟ್ಟ. ನಾರಾಯಣ್ ನಂಬಿದರು.

ಹಾಗೆ ನಾರಾಯಣ್‍ರನ್ನು ನಂಬಿಸೋಕೆ ಆ ಖದೀಮ, ಮೆಟ್ಟುಪಾಳ್ಯಂನ ಜ್ಯೋತಿಷಿ ರಮೇಶ್ ಎಂಬುವವನ ಬಳಿಗೆ ಕರೆದುಕೊಂಡು ಹೋಗಿದ್ದ. ಫೈನಾನ್ಷಿಯರ್ ಎಂದು ಕರೆಸಿಕೊಂಡಿದ್ದವನ ಬಳಿಗೆ ಕರೆದುಕೊಂಡು ಹೋಗಿದ್ದ. ನೋಂದಣಿಧಿಕಾರಿಗಳನ್ನು ಪರಿಚಯ ಮಾಡಿಸಿ, ಅಲ್ಲಿಯೇ ಡಿಡಿಯನ್ನೂ ಮಾಡಿಸಿದ್ದ. ಎಲ್ಲವೂ ನಾರಾಯಣ್ ಕಣ್ಣೆದುರೇ ನಡೆದಿತ್ತು. ಆದರೆ, ಸಾಲ ಕೊಡುವುದಕ್ಕೂ ಮೊದಲೇ ಕಮಿಷನ್ ಕೊಡಬೇಕು ಎಂದರು ಖದೀಮರು. ನಾರಾಯಣ್ ಅವರ ಅಕೌಂಟ್‍ಗೆ 43 ಲಕ್ಷ ಹಾಕಿದರು. ಆಮೇಲೆ ಖದೀಮರು ನಾಪತ್ತೆ.

ಈಗ ಅವರನ್ನು ಅರೆಸ್ಟ್ ಮಾಡೋಕೆ ಪೊಲೀಸರೇ ಉದ್ಯಮಿಗಳ ವೇಷದಲ್ಲಿ ಹೋಗಿ ನಾಟಕವಾಡಿದ್ದಾರೆ. ಮೂವರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಇಬ್ಬರು ಸಿಕ್ಕಿಲ್ಲ. ನಾನು ಯಾರನ್ನೂ ಅಷ್ಟು ಸುಲಭವಾಗಿ ನಂಬುವವನಲ್ಲ. ಜಾಗರೂಕನಾಗಿರುತ್ತೇನೆ. ಆದರೂ ಕೆಲವೊಮ್ಮೆ ಎಡವಟ್ಟಾಗುತ್ತೆ ಎಂದಿದ್ದಾರೆ ಎಸ್.ನಾರಾಯಣ್.

#

Adi Lakshmi Purana Movie Gallery

Rightbanner02_butterfly_inside

Yaana Movie Gallery