Print 
jogi prem, shivarajkumar, kiccha sudeepa cbfc the villain,

User Rating: 0 / 5

Star inactiveStar inactiveStar inactiveStar inactiveStar inactive
 
the villain goes to revising committeee
The Villain

ಶಿವರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ಪ್ರಮಾಣಪತ್ರ ನೀಡುತ್ತೇವೆ ಎಂದಿದ್ದಾರೆ. ಈ ಸರ್ಟಿಫಿಕೇಟ್ ಕೊಡೋಕೆ ಅವರು ನೀಡುತ್ತಿರುವ ಕಾರಣಗಳಿವೆ. ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಿವೆ. ಭಾರತೀಯರು ಬ್ರಿಟಿಷರ ಬಗ್ಗೆ ಮಾತನಾಡುವ ಡೈಲಾಗ್‍ಗಳಿವೆ. ಅಂಡರ್‍ವಲ್ರ್ಡ್ ಸಬ್ಜೆಕ್ಟ್. ಹೀಗಾಗಿ ಎ ಪ್ರಮಾಣ ಪತ್ರ ಎನ್ನುತ್ತಿದ್ದಾರೆ ಸೆನ್ಸಾರ್ ಅಧಿಕಾರಿಗಳು.

ನಾವು ಮಾಡಿರುವು ಫ್ಯಾಮಿಲಿ ಓರಿಯಂಟೆಡ್ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಕೂಡಾ ಇದೆ. ಎ ಸರ್ಟಿಫಿಕೇಟ್ ಕೊಟ್ಟರೆ, ಮಲ್ಟಿಪ್ಲೆಕ್ಸ್‍ಗಳಲ್ಲಿ ಪ್ರಾಬ್ಲಂ ಆಗುತ್ತೆ. ಯು/ಎ ಪ್ರಮಾಣ ಪತ್ರವನ್ನಾದರೂ ಕೊಟ್ಟರೆ ಒಳ್ಳೆಯದು. ಹೀಗಾಗಿ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಒಯ್ಯುವುದಾಗಿ ತಿಳಿಸಿದ್ದಾರೆ ನಿರ್ದೇಶಕ ಪ್ರೇಮ್.

ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರವನ್ನು ಗೌರಿಗಣೇಶ ಹಬ್ಬಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ರಿವೈಸಿಂಗ್ ಕಮಿಟಿ ನಿರ್ಧಾರ ಏನಾಗಲಿದೆಯೋ.. ಕಾಯಬೇಕಷ್ಟೆ.