` ಟ್ರೇಲರ್‍ಗೂ ಮೊದಲೇ ಲಿಪ್‍ಲಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bhairava geetha poster goes viral
Bhairava Geetha

ಭೈರವ ಗೀತ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ, ವರ್ಮಾ ಶಿಷ್ಯ ಸಿದ್ದಾರ್ಥ ನಿರ್ದೇಶನದ ಸಿನಿಮಾ. ಡಾಲಿ ಧನಂಜಯ್ ಅಭಿನಯದ ಚಿತ್ರದ ಟ್ರೇಲರ್ ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್‍ಗೂ ಮುನ್ನವೇ ವರ್ಮಾ, ಚಿತ್ರದ ಕೆಲವೊಂದು ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್‍ಗಳು ಸದ್ದು ಮಾಡೋಕೆ ಶುರುವಾಗಿವೆ.

ವರ್ಗ ವೈಷಮ್ಯ ಮತ್ತು ಲವ್ ಸ್ಟೋರಿ ಇರುವ ಸಿನಿಮಾ ಇದು. ವರ್ಮಾ ಸ್ಟೈಲ್‍ನಲ್ಲೇ ಇರೋ ಪೋಸ್ಟರ್‍ಗಳಲ್ಲಿ ಧನಂಜಯ ಮತ್ತು ಇರಾ ನಡುವಿನ ಲಿಪ್‍ಲಾಕ್ ಸೀನ್ ಹವಾ ಎಬ್ಬಿಸಿದೆ. ಇರಾಗೆ ಇದು ಮೊದಲ ಸಿನಿಮಾ. ಧನಂಜಯ್‍ಗೆ ಸ್ಕ್ರೀನ್ ಮೇಲೆ ಮೊದಲ ಚುಂಬನ. ಚಿತ್ರದಲ್ಲಿ ಆ್ಯಕ್ಷನ್, ರೊಮ್ಯಾನ್ಸ್‍ಗೆ ಬರವೇ ಇಲ್ಲ ಎಂದಿದ್ದಾರೆ ವರ್ಮಾ. 

Chemistry Of Kariyappa Movie Gallery

BellBottom Movie Gallery