` ಸೆನ್ಸಾರ್‍ಗೆ ಹೊರಟ ವಿಲನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain reached censor office
The Villain

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ದಿ ವಿಲನ್. ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಜನಪ್ರಿಯಗೊಂಡಿವೆ. ಒಂದೊಂದು ಹಾಡೂ ಒಂದೊಂದು ರೀತಿ ಸ್ಪೆಷಲ್. ಹೀಗಿರುವಾಗಲೇ ಶೀಘ್ರದಲ್ಲೇ ರಿಲೀಸ್ ಡೇಟ್ ಪ್ರಕಟಿಸೋದಾಗಿ ಘೋಷಿಸಿದ್ದಾರೆ ನಿರ್ದೇಶಕ ಪ್ರೇಮ್.

ಕಾಯುವಿಕೆ ಮುಗಿಯಿತು. ಅಭಿಮಾನಿಗಳೇ.. ಉಸಿರು ಬಿಗಿ ಹಿಡಿದುಕೊಳ್ಳಿ. ಚಿತ್ರ ಸೆನ್ಸಾರ್‍ಗೆ ಹೊರಟಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ ಜೋಗಿ ಪ್ರೇಮ್.

ಸಿ.ಆರ್. ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರಕ್ಕೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎಂಬುದು ನಿರ್ವಿವಾದ.