Print 
darshan, odeya,

User Rating: 5 / 5

Star activeStar activeStar activeStar activeStar active
 
darshan gets 4 brothers in odeya movie
Darshan Image

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ತಮ್ಮಂದಿರು ಸಿಕ್ಕಿದ್ದಾರೆ. ದರ್ಶನ್‍ಗೆ ಇರೋದು ಒಬ್ಬ ತಮ್ಮ. ಅವರು ದಿನಕರ್ ತೂಗುದೀಪ್. ಹೊಸಬರು ಯಾರು.. ಎಂದು ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಇದು ಒಡೆಯ ಚಿತ್ರದ ಸುದ್ದಿ.

ಒಡೆಯ, ತಮಿಳಿನ ವೀರಂ ಚಿತ್ರದ ರೀಮೇಕ್. ಚಿತ್ರದಲ್ಲಿ ಒಡೆಯನಿಗೆ ನಾಲ್ವರು ತಮ್ಮಂದಿರುರುತ್ತಾರೆ. ಆ ನಾಲ್ವರು ತಮ್ಮಂದಿರ ಪಾತ್ರಕ್ಕೆ ಯಶಸ್, ನಿರಂಜನ್, ಪಂಕಜ್ ಹಾಗೂ ಸಮರ್ಥ್ ಆಯ್ಕೆಯಾಗಿದ್ದಾರೆ.

ಯಶಸ್, ದರ್ಶನ್ ಅವರ ಗೆಳೆಯರ ಬಳಗದಲ್ಲಿರುವವರು. ಪಂಕಜ್, ಎಸ್.ನಾರಾಯಣ್ ಅವರ ಮಗ. ಸಮರ್ಥ್, ಸಂದೇಶ್ ನಾಗರಾಜ್ ಅವರ ತಮ್ಮನ ಮಗ. ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ. 

ದೇವರಾಜ್, ಚಿಕ್ಕಣ್ಣ, ರವಿಶಂಕರ್, ಸಾಧುಕೋಕಿಲ ನಟಿಸುತ್ತಿದ್ದು, ಮೈಸೂರಿನಲ್ಲೇ ಚಿತ್ರದ ಬಹುಪಾಲು ಚಿತ್ರೀಕರಣ ನಡೆಯಲಿದೆ.