ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ತಾರಕಾಸುರ ರಿಲೀಸ್‍ಗೆ ರೆಡಿಯಾಗಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಬಹುತೇಕರು ಮರೆತೇ ಹೋಗಿರುವ ಒಂದು ಜನಪದ ಕಲೆಯ ಸುತ್ತ, ಸಿನಿಮಾದ ಕಥೆ ಹೆಣೆಯಲಾಗಿದೆ. ಕಲೆ, ಕಲೆಯಿಂದಾಗಿಯೇ ಉದ್ಭವವಾಗುವ ಸಮಸ್ಯೆಗಳು ಚಿತ್ರದ ಜೀವಾಳ ಎಂದಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ.
ಚಿತ್ರದ ನಿರ್ಮಾಪಕ ನರಸಿಂಹಲು. ಅವರ ಮಗ ವೈಭವ್ ಚಿತ್ರದ ಹೀರೋ. ಮಾನ್ವಿತಾ ಹರೀಶ್ ನಾಯಕಿ. ಗೌರಿ ಹಬ್ಬಕ್ಕೆ ಚಿತ್ರದ ಆಡಿಯೋ ರಿಲೀಸ್ ಆಗಲಿದ್ದು, ಅದಾದ ನಂತರ ಸಿನಿಮಾ ಬಿಡುಗಡೆಯಾಗಲಿದೆ.