ಕನ್ನಡದ ಕೋಟ್ಯಧಿಪತಿಗೆ ರಕ್ಷಿತ್ ಶೆಟ್ಟಿ ಅತಿಥಿಯಾಗಿದ್ದಾರೆ. ರಮೇಶ್ ಅರವಿಂದ್ ಎದುರು ಹಾಟ್ಸೀಟ್ನಲ್ಲಿ ಕುಳಿತು, ಸವಾಲು ಎದುರಿಸಿದ್ದಾರೆ. ಈ ಕೋಟ್ಯಧಿಪತಿ ಸಂಚಿಕೆಯಲ್ಲಿ ಎರಡು ವಿಶೇಷಗಳಿವೆ. ಇದು ಕೋಟ್ಯಧಿಪತಿ ಸಿರೀಸ್ನ 50ನೇ ಎಪಿಸೋಡ್. ಈ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸುತ್ತಿರುವುದು ಕೊಡಗಿಗಾಗಿ.
ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಸಂತ್ರಸ್ತರಿಗೆ ರಕ್ಷಿತ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಗೆದ್ದ ಹಣ ಸಂದಾಯವಾಗಲಿದೆ. ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಅವರ ತಂದೆ, ತಾಯಿ, ಸಹೋದರ ರಂಜಿತ್ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಭಾಗವಹಿಸಿದ್ದಾರೆ.
ರಮೇಶ್ ಎದುರು ರಕ್ಷಿತ್ ಶೆಟ್ಟಿ, ನಿರ್ದೇಶಕರಾದ ಸಿಂಪಲ್ ಸುನಿ, ಹೇಮಂತ್ ರಾವ್ ಹಾಗೂ ಕಿರಣ್ ರಾಜ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನೂ ಹೇಳಿಕೊಂಡಿದ್ದಾರಂತೆ. ಇದೇ ಶುಕ್ರವಾರ ರಕ್ಷಿತ್ ಶೆಟ್ಟಿ ಕಾರ್ಯಕ್ರಮ ಪ್ರಸಾರವಾಗಲಿದೆ.