` ಬಾಲಕಿಯ ರಥಸಪ್ತಮಿ ಹಾಡಿಗೆ ಮಂತ್ರಮುಗ್ಧರಾದ ಶಿವಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna mesmerized by girl singing rathasapthami song
Shivarajkumar

ಶಿಲೆಗಳು ಸಂಗೀತವಾ ಹಾಡಿವೆ.. ಇದು ರಥಸಪ್ತಮಿ ಚಿತ್ರದ ಸೂಪರ್ ಹಿಟ್ ಸಾಂಗ್. ಈ ಹಾಡನ್ನು ಪುಟ್ಟ ಹುಡುಗಿಯೊಬ್ಬಳು ಹಾಡಿದ್ದಾಳೆ. ನೆಲಮಂಗಲ ಸರ್ಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ದೀಪ್ತಿ, ಈ ಹಾಡು ಹಾಡಿದ್ದಾಳೆ. ಆ ಹಾಡು ಕೇಳಿ, ಶಿವಣ್ಣ ಮಂತ್ರಮುಗ್ದರಾಗಿ ಹೋಗಿದ್ದಾರೆ.

ನೆಲಮಂಗಲ ಸರ್ಕಾರಿ ಸ್ಕೂಲ್‍ನಲ್ಲಿ ಶಿವರಾಜ್ ಕುಮಾರ್ ಅವರ ದ್ರೋಣ ಚಿತ್ರದ ಶೂಟಿಂಗ್ ನಡೆಯುತ್ತಿದೆ. ದ್ರೋಣ ಚಿತ್ರದಲ್ಲಿ ಶಿವರಾಜ್‍ಕುಮಾರ್, ಟೀಚರ್ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಇರುವ ಶಿವಣ್ಣ ಎದುರು ಈ ಪುಟ್ಟ ಹುಡುಗಿ ದೀಪ್ತಿ ಶಿಲೆಗಳು ಸಂಗೀತವಾ ಹಾಡಿವೆ ಎಂಬ ಹಾಡು ಹಾಡಿದ್ದಾಳೆ. ಅಷ್ಟೇ ಅಲ್ಲ, ನಾಗಮಂಡಲ ಚಿತ್ರದ ಕಂಬದ ಮ್ಯಾಲಿನ ಗೊಂಬೆಯೇ ಹಾಡನ್ನೂ ಹಾಡಿದ್ದಾಳೆ.ಎರಡು ಸುಂದರ ಹಾಡು ಹಾಡಿ ಶಿವಣ್ಣಂಗೆ ರಾಖಿ ಕಟ್ಟಿದ್ದಾಳೆ. ಪುಟ್ಟ ಹುಡುಗಿಯ ಮುದ್ದು ಪ್ರೀತಿಗೆ ಶಿವಣ್ಣ ಪ್ರೀತಿಯ ಹೂಮುತ್ತು ಕೊಟ್ಟಿದ್ದಾರೆ.

Padarasa Movie Gallery

Kumari 21 Movie Gallery