ಬಿಗ್ಬಾಸ್ ಖ್ಯಾತಿಯ ಸಿಂಗರ್ ಚಂದನ್ ಶೆಟ್ಟಿ ಅವರಿಗೆ 2 ವರ್ಷದ ಹಿಂದಿನ ಗಾಂಜಾ ಹಾಡಿನ ಬಿಸಿ ತಟ್ಟಿದೆ. ಸಿನಿಮಾವೊಂದಕ್ಕೆ ಚಂದನ್ ಶೆಟ್ಟಿ ಹಾಡಿದ್ದ ಹಾಡು, ಯೂಟ್ಯೂಬ್ನಲ್ಲಿ ಹಿಟ್ ಆಗಿತ್ತು.
ಹಾಡಿನಲ್ಲಿನ ಸಾಹಿತ್ಯ, ಮಾದಕ ವಸ್ತು ಸೇವನೆಗೆ ಪ್ರಚೋದಿಸುವಂತಿದೆ ಎಂದು ಹೇಳಿ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ಪೊಲೀಸರು ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ, ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಾನು ಹಾಡು ಹಾಡಿದ್ದೇನೆ. ಇದು ಇಷ್ಟು ತಪ್ಪು ಎಂದು ಗೊತ್ತಿರಲಿಲ್ಲ. ಇಷ್ಟು ಪ್ರಭಾವ ಬೀರುತ್ತೆ ಎಂಬ ಅರಿವೂ ಇರಲಿಲ್ಲ. ಸಿಸಿಬಿ ನೋಟಿಸ್ಗೆ ಖುದ್ದು ಹಾಜರಾಗಿ ವಿವರಣೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.