` ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಉದ್ದಿಶ್ಯ ಸಂಭ್ರಮದ ಸವಾರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
uddishya shines at international film festivals
Uddishya

ಉದ್ದಿಶ್ಯ. ಬಿಡುಗಡೆಗೆ ಮೊದಲೇ ಭರ್ಜರಿ ಸದ್ದು ಮಾಡುತ್ತಿರುವ ಈ ಸಿನಿಮಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದೇ ಆಗಸ್ಟ್ 31ಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರ, ಬಿಡುಗಡೆಗೂ ಮೊದಲೇ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ.

ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆಯಲಿರುವ ಟು ಡಾಲರ್ ಫಿಲ್ಮ್ ಫೆಸ್ಟಿವಲ್‍ಗೆ ಅಧಿಕೃತವಾಗಿ ಆಯ್ಕೆಗೊಂಡಿರುವ ಚಿತ್ರ ಉದ್ದಿಶ್ಯ. ಜಪಾನ್‍ನಲ್ಲಿ ನಡೆಯುವ ಜಾನರ್ ಸೆಲಬ್ರೇಷನ್ ಫಿಲ್ಮ್ ಫೆಸ್ಟಿವಲ್‍ಗೂ ಆಯ್ಕೆಯಾಗಿದೆ. ಇದರ ಜೊತೆ ಪ್ರಶಸ್ತಿ ರೇಸ್‍ನಲ್ಲೂ ಮುನ್ನುಗ್ಗಿದೆ ಉದ್ದಿಶ್ಯ.

ಟಾಪ್ ಇಂಡಿ ಅವಾಡ್ರ್ಸ್ ಆನ್‍ಲೈನ್ ಫಿಲ್ಮ್ ಫೆಸ್ಟಿವಲ್‍ಗೆ ಒರಿಜಿನಲ್ ಐಡಿಯಾ ಹಾಗೂ ಮೋಸ್ಟ್ ಟೆರಿಫಯಿಂಗ್ ವಿಭಾಗದಲ್ಲಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ಬಾರ್ಸಿಲೋನ ಫಿಲಂ ಫೆಸ್ಟಿವಲ್‍ನಲ್ಲೂ ಉದ್ದಿಶ್ಯ ಚಿತ್ರಕ್ಕೆ ಆಹ್ವಾನ ಸಿಕ್ಕಿದೆ. ಹೀಗೆ.. ಚಿತ್ರೋತ್ಸವಗಳಲ್ಲಿ ಸಂಭ್ರಮದಲ್ಲೇ ಮಿಂದೆದ್ದಿರುವ ಉದ್ದಿಶ್, ಆಗಸ್ಟ್ 31ಕ್ಕೆ ಚಿತ್ರಮಂದಿರಗಳಿಗೆ ಬರುತ್ತಿದೆ.

ಹಾಲಿವುಡ್ ಕಥೆಗಾರನ ಕಥೆ ಆಧರಿಸಿದ ಉದ್ದಿಶ್ಯ ಚಿತ್ರಕ್ಕೆ ಹೇಮಂತ್ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ. ಅರ್ಚನಾ ಗಾಯಕ್ವಾಡ್ ಅಭಿನಯದ ಮೊದಲ ಸಿನಿಮಾ ಇದು. ಅಮೆರಿಕದಲ್ಲಿಯೇ ಕಿರುಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಹೇಮಂತ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

#

The Terrorist Movie Gallery

Thayige Thakka Maga Movie Gallery