ಉದ್ದಿಶ್ಯ. ಹೆಸರೇ ಸ್ವಲ್ಪ ವಿಶೇಷ ಎನಿಸುತ್ತೆ. ಇದು ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಸಿನಿಮಾದ ಟೈಟಲ್. ಹಾಲಿವುಡ್ ಕಥೆಗಾರರು ಬರೆದಿರುವ ಕಥೆಗೆ, ಚಿತ್ರಕಥೆ ಹೆಣೆದು ಕನ್ನಡಕ್ಕೆ ತರುತ್ತಿದ್ದಾರೆ ಹೇಮಂತ್.
ಮೂಲತಃ ಕನ್ನಡಿಗರೇ ಆಗಿರುವ ಹೇಮಂತ್, ಏಳೆಂಟು ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದವು. ಕಿರುಚಿತ್ರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಹೇಮಂತ್ ಕೃಷ್ಣಪ್ಪ, ಈ ಚಿತ್ರದ ಮೂಲಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪಕ್ಕಾ ಪ್ರೊಫೆಷನಲ್ ಎನ್ನುವುದು ಅವರು ಚಿತ್ರವನ್ನು ಪ್ರಮೋಟ್ ಮಾಡುತ್ತಿರುವ ರೀತಿಯಲ್ಲಿಯೇ ಎದ್ದು ಕಾಣುತ್ತಿದೆ.
7 ಮಿನಿಟ್ಸ್ ಎಂಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕಿರುಚಿತ್ರ ನಿರ್ಮಿಸಿದ್ದ ತಂಡವೇ, ಉದ್ದಿಶ್ಯ ಚಿತ್ರಕ್ಕೂ ಕೆಲಸ ಮಾಡಿದೆ. ರಾಬರ್ಟ್ ಗ್ರಿಫಿನ್ ಕಥೆಗೆ ಚಿತ್ರಕಥೆಯ ರೂಪ ನೀಡಿ, ನಿರ್ದೇಶನ ಮಾಡಿದ್ದಾರೆ ಹೇಮಂತ್ ಕೃಷ್ಣಪ್ಪ. ಅರ್ಚನ ಗಾಯಕ್ವಾಡ್ ಚಿತ್ರದ ನಾಯಕಿ. ಕ್ಯಾಮೆರಾ, ನಿರ್ದೇಶನ ಹೊಸದಲ್ಲವಾದರೂ, ಕನ್ನಡ ಚಿತ್ರರಂಗಕ್ಕೆ ಇವರು ಹೊಸಬರು. ಹಾಲಿವುಡ್ ಶೈಲಿಯಲ್ಲಿಯೇ ನಿರ್ಮಾಣವಾಗಿರುವಂತೆ ಕಾಣುತ್ತಿರುವ ಚಿತ್ರ, ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ವಿಭಿನ್ನ ಅನುಭವ ನೀಡಲಿದೆ.