ಒಂದಲ್ಲಾ.. ಎರಡಲ್ಲಾ... ಸಿನಿಮಾ ರಿಲೀಸ್ ಆಗಿದೆ. ಅದ್ಭುತ ಎನ್ನಿಸುವಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಚಿತ್ರ ನೋಡಿದ ಪ್ರೇಕ್ಷಕರು, ವಿಮರ್ಶಕರು, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದು ರಾಮಾ ರಾಮಾ ರೇ ಆಗುವ, ಅದನ್ನೂ ಮೀರಿಸುವ ಸುಳಿವು ನೀಡಿದೆ ಒಂದಲ್ಲಾ.. ಎರಡಲ್ಲಾ.. ಆದರೆ ಚಿತ್ರಕ್ಕೆ ಟೆಕ್ನಿಕಲ್ ಪ್ರಾಬ್ಲಂ.
ಚಿತ್ರವನ್ನು ಥಿಯೇಟರುಗಳಲ್ಲಿ ಪ್ರದರ್ಶನ ಮಾಡುವ ಯುಎಫ್‍ಓ ಸಂಸ್ಥೆಯ ತಾಂತ್ರಿಕ ಸಮಸ್ಯೆಯಿಂದಾಗಿ, ಚಿತ್ರದ ಸುಮಾರು 60 ಶೋಗಳು ರದ್ದಾಗಿವೆ. ಶಿವಮೊಗ್ಗ, ಮಣಿಪಾಲ್, ಮಂಗಳೂರು ಸೇರಿದಂತೆ ಹಲವಾರು ಕಡೆ ಚಿತ್ರ ಪ್ರದರ್ಶನ ಆಗಿಲ್ಲ.
ಸತ್ಯಪ್ರಕಾಶ್ ನಿರ್ದೇಶನದ ಸಿನಿಮಾಗೆ ಉಮಾಪತಿ ನಿರ್ಮಾಪಕರು. ಒಂದು ಹಸು ಹಾಗೂ ಒಬ್ಬ ಪುಟ್ಟ ಹುಡುಗನ ಮೂಲಕ, ವಿಭಿನ್ನ ಸಂದೇಶ ಇರುವ ಸಿನಿಮಾ ನೀಡಿರುವ ನಿರ್ದೇಶಕ, ನಿರ್ಮಾಪಕರು ಈಗ ಯುಎಫ್‍ಓ ಸಂಸ್ಥೆಯ ವಿರುದ್ಧ ಸಿಟ್ಟಾಗಿದ್ದಾರೆ.