` 8ಎಂಎಂ ಜಗ್ಗೇಶ್.. ಸಂಭವಾಮಿ ಯುಗೇ ಯುಗೇ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
8mm new trailer released
8MM Image

ನವರಸ ನಾಯಕ ಜಗ್ಗೇಶ್ ಅಭಿನಯದ 8ಎಂಎಂ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿದೆ. ಇದು ಕ್ರಿಮಿನಲ್ ಮತ್ತು ಪೊಲೀಸ್ ನಡುವಣ ಮೈಂಡ್‍ಗೇಮ್ ಕಥೆ ಹೊಂದಿರುವ ಚಿತ್ರ. ಜಗ್ಗೇಶ್ ಇದೇ ಮೊದಲ ಬಾರಿಗೆ ಕಪ್ಪು ಬಿಳಿ ಗಡ್ಡದಲ್ಲಿ, ತಮ್ಮ ಈಗಿನ ವಯಸ್ಸಿಗೆ ಹೊಂದುವಂತೆ ಕಾಣಿಸಿಕೊಂಡಿರೋದು ವಿಶೇಷ. 

ಚಿತ್ರ ಶುರುವಾದಾಗಿನಿಂದಲೂ ಚಿತ್ರದ ಕಥೆ, ತಮ್ಮ ಪಾತ್ರದ ಬಗ್ಗೆ ಜಗ್ಗೇಶ್ ಎಕ್ಸೈಟ್ ಆಗಿ ಹೇಳಿಕೊಂಡಿದ್ದರು. ಅದಕ್ಕೆ ಕಾರಣಗಳೂ ಚಿತ್ರದ ಈ 2ನೇ ಟೀಸರ್‍ನಲ್ಲಿ ಸಿಗುತ್ತವೆ. ರಾಕ್‍ಲೈನ್ ವೆಂಕಟೇಶ್,  ವಸಿಷ್ಟ ಸಿಂಹ, ಮಯೂರಿ ಮೊದಲಾದವರು ಕಾಣಿಸಿಕೊಂಡಿರುವ ಟೀಸರ್‍ನಲ್ಲಿ ಭಗವದ್ಗೀತೆಯ ಸಂಭವಾಮಿ ಯುಗೇ ಯುಗೇ ಶ್ಲೋಕ ಕೇಳಿಸುತ್ತೆ. ಅಷ್ಟನ್ನು ಕೇಳುವ ಹೊತ್ತಿಗೆ, ಸಣ್ಣದೊಂದು ಟೆನ್ಷನ್ ಶುರುವಾಗುತ್ತೆ. 8ಎಂಎಂ ಟೀಸರ್‍ನ ಸಕ್ಸಸ್ಸಿರುವುದೇ ಅಲ್ಲಿ. ಚಿತ್ರದ ನಿರ್ದೇಶಕ ಹರಿಕೃಷ್ಣ.

#

The Terrorist Movie Gallery

Thayige Thakka Maga Movie Gallery