` ಸುವರ್ಣ ಸುಂದರಿಯಾಗಿ ಮತ್ತೆ ಜಯಪ್ರದಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jayapradha image
actress jayapradha

ಜಯಪ್ರದಾ. ಹಾಗೆಂದರೆ ಕನ್ನಡಿಗರಿಗೆ ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ, ಶಬ್ಧವೇದಿ, ಹಿಮಪಾತ ಚಿತ್ರಗಳು ನೆನಪಾಗುತ್ತವೆ. ಕನ್ನಡ ಚಿತ್ರರಂಗದಲ್ಲಿ ಜಯಪ್ರದಾ ನಟಿಸಿದ್ದ ಕಡೆಯ ಸಿನಿಮಾ, ಸಂಗೊಳ್ಳಿ ರಾಯಣ್ಣ. ಆ ಚಿತ್ರದಲ್ಲಿ ಚೆನ್ನಮ್ಮನಾಗಿ ಮಿಂಚಿದ್ದ ಜಯಪ್ರದಾ, ಈಗ ಮತ್ತೊಮ್ಮೆ ಬರುತ್ತಿದ್ದಾರೆ. ಸುವರ್ಣ ಸುಂದರಿಯಾಗಿ.

ಸುವರ್ಣ ಸುಂದರಿ ಎಂಬ ಚಿತ್ರದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿನ ರಾಣಿಯಾಗಿ ನಟಿಸುತ್ತಿದ್ದಾರೆ ಜಯಪ್ರದಾ. ಎಂಎಸ್‍ಎನ್ ಸೂರ್ಯ ಎಂಬುವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಪುನರ್ಜನ್ಮದ ಕಥೆಯೂ ಇದೆ. ಎಂಎಲ್ ಲಕ್ಷ್ಮಿ ಎಂಬುವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್‍ನ್ನು ಶಿವರಾಜ್ ಬಿಡುಗಡೆ ಮಾಡಿರುವುದು ವಿಶೇಷ.

Chemistry Of Kariyappa Movie Gallery

BellBottom Movie Gallery