ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಒನ್ಲೈನ್ ಸ್ಟೋರಿ ಏನು..? ನಿರ್ದೇಶಕರು ಹೇಳೋದು ಒಂದೇ ವರ್ಡ್ ಉತ್ತರ. ಲೈಫ್ ಈಸ್ ಬ್ಯೂಟಿಫುಲ್. ಚಿತ್ರದ ಕಥೆ ಇರುವುದು ಹಾಗೂ ಚಿತ್ರಕಥೆಯೊಳಗಿನ ಹೂರಣ ಇದೆ..
ಜೀವನವನ್ನು ನಾವು ಇಷ್ಟಪಟ್ಟಂತೆ ಬದುಕಬೇಕು ಎಂದು ಕನಸು ಕಾಣುವ ನಾಯಕಿ. ಕಟ್ಟುಪಾಡುಗಳನ್ನೆಲ್ಲ ಧಿಕ್ಕರಿಸಿ ಹೊರಡುವ ಅವಳಿಗೆ, ಯಾವುದೋ ಕಾರಣದಿಂದಾಗಿ ಒಂದು ಸೆಲ್ಫಿಗೆ ಒಂದಾಗ್ತಾರೆ. ಅವರು ಸೆಲ್ಫಿಗೆ ಒಂದಾಗೋದು ಏಕೆ ಅನ್ನೋದೇ ಇಂಟ್ರೆಸ್ಟಿಂಗ್ ಆಗಿದ್ಯಂತೆ.
ಬೋಲ್ಡ್ ಹುಡುಗಿಯಾಗಿ ಹರಿಪ್ರಿಯಾ, ಕೋಟ್ಯಧಿಪತಿಯಾಗಿ ಪ್ರಜ್ವಲ್ ದೇವರಾಜ್, ನಿರ್ದೇಶಕನಾಗುವ ಕನಸು ಹೊತ್ತ ಹುಡುಗನಾಗಿ ಪ್ರೇಮ್ ನಟಿಸಿದ್ದಾರೆ. ಇವರೆಲ್ಲರನ್ನೂ ಒಟ್ಟಿಗೇ ನಿಲ್ಲಿಸಿ ಸೆಲ್ಫಿ ತಗೊಂಡಿರೋದು ದಿನಕರ್ ತೂಗುದೀಪ್. ಸೆಲ್ಫಿ ಹೆಂಗಿದ್ಯೋ.. ಇದೇ ವಾರ ನೋಡಿ ಹೇಳಿ.