ಹೊಗಳಿರುವುದು ನಿರ್ಮಾಪಕ ಉಮಾಪತಿ. ಹೊಗಳಿಸಿಕೊಂಡಿರುವುದು ನಿರ್ದೇಶಕ ಸತ್ಯಪ್ರಕಾಶ್. ಉಮಾಪತಿಯವರಿಗಾಗಿ ಸತ್ಯಪ್ರಕಾಶ್ ನಿರ್ದೇಶಿಸಿರುವ ಒಂದಲ್ಲಾ.. ಎರಡಲ್ಲಾ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.
ಒಂದಲ್ಲಾ.. ಎರಡಲ್ಲಾ.. ಸಿನಿಮಾ ಮಾಡೋಕೆ ಸತ್ಯಪ್ರಕಾಶ್ ಹಾಗೂ ಅವರಲ್ಲಿದ್ದ ಕಾನ್ಫಿಡೆನ್ಸ್ ಕಾರಣ. ಅವರಿಗೆ ಸಿನಿಮಾ ಮಾಡೋಕೆ ಯೆಸ್ ಎಂದಾಗ ನಾನು ಅವರ ರಾಮಾ ರಾಮಾ ರೇ ಸಿನಿಮಾ ನೋಡಿಯೇ ಇರಲಿಲ್ಲ. ನಾಲ್ಕೈದು ಸಿನಿಮಾ ಕದ್ದು, ಒಂದು ಸಿನಿಮಾ ಮಾಡುವ ನಿರ್ದೇಶಕರಿಗಿಂತ, ತಾನೇ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಜನ ಮೆಚ್ಚುವಂತಹ ಸಿನಿಮಾ ಮಾಡುವ ಸತ್ಯಪ್ರಕಾಶ್ ಅಂತಹವರಿಗೆ ಪ್ರೋತ್ಸಾಹ ಕೊಡಬೇಕು. ಅದು ನನಗೆ ಅತ್ಯಂತ ಸಂತೋಷ ಕೊಟ್ಟ ಸಂಗತಿ.
ಇದು ಉಮಾಪತಿ, ಸತ್ಯಪ್ರಕಾಶ್ ಅವರನ್ನು ಹೊಗಳಿರುವ ರೀತಿ. ಇದು ಇಷ್ಟಕ್ಕೇ ನಿಲ್ಲಲ್ಲ. ಸತ್ಯಪ್ರಕಾಶ್ ತುಂಬಾ ಸ್ವಾಭಿಮಾನಿಯಂತೆ. ಈ ಸಿನಿಮಾವನ್ನು ನಾನು ಕೇವಲ ಆತ್ಮತೃಪ್ತಿಗೋಸ್ಕರ ಮಾಡುತ್ತಿದ್ದೇನೆ. ಸಿನಿಮಾದ ಸೋಲು, ಗೆಲುವು ನನಗೆ ಮುಖ್ಯವೇ ಅಲ್ಲ. ಮುಂದೆಯೂ ಕೂಡಾ ಸತ್ಯಪ್ರಕಾಶ್ ಜೊತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸದಿಂದ ಹೇಳ್ತಾರೆ ಉಮಾಪತಿ.
ಚಿತ್ರದಲ್ಲಿ ಹಿಂದೂ ಮುಸ್ಲಿಂ ಬಾಂಧವ್ಯದ ಸಂದೇಶವೂ ಇದೆ. ಅದನ್ನು ಮುಗ್ಧ ಮಗುವಿನ ಕಣ್ಣಿನಲ್ಲಿ ನೋಡುವ ಪ್ರಯತ್ನ ಚಿತ್ರದಲ್ಲಿದೆ ಅಂತಾರೆ ಉಮಾಪತಿ. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.