` ಕೊಡಗಿನ ಕಣ್ಣೀರು - ಸಿಎಂ ನಿಧಿಗೆ ಶಿವರಾಜ್ ಕುಮಾರ್ ದೇಣಿಗೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sandalwood stars extend support
Kodagu gets Help From Sandalwood Stars

ಕಣ್ಣೀರಿಡುತ್ತಿರುವ ಕೊಡಗಿನ ಜನರ ಸಂಕಷ್ಟಕ್ಕೆ ಸ್ಯಾಂಡಲ್‍ವುಡ್ ಮಿಡಿಯುತ್ತಿದೆ. ಸ್ಟಾರ್ ನಟರು ಅಭಿಮಾನಿ ಸಂಘಗಳ ಮೂಲಕ ಕೊಡಗಿನ ಜನರ ನೆರವಿಗೆ ಧಾವಿಸಿದ್ದಾರೆ. ನಟ ಶಿವರಾಜ್ ಕುಮಾರ್, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟ ಪ್ರಕಾಶ್ ರೈ ಕೂಡಾ 5 ಲಕ್ಷ ರೂ. ದೇಣಿಗೆ ನೀಡಿದ್ದು, ತಮ್ಮ ಸಂಘದ ಸದಸ್ಯರ ಜೊತೆ ಕೊಡಗಿನಲ್ಲಿ ಪುನರ್‍ವಸತಿ ಕಾರ್ಯದಲ್ಲಿ ತೊಡಗಿಸಿಕೊಳ್ಳೋದಾಗಿ ತಿಳಿಸಿದ್ದಾರೆ. ರಾಜ್‍ಕುಮಾರ್ ಅಕಾಡೆಮಿ ಟ್ರಸ್ಟ್ ಮೂಲಕ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಪುನೀತ್, ಸುದೀಪ್, ದರ್ಶನ್, ಯಶ್ ಅಭಿಮಾನಿ ಸಂಘಗಳೂ ನೆರವಿನ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕೊಡಗಿನವರೇ ಆದ ಹರ್ಷಿಕಾ ಪೂಣಚ್ಚ, ಭುವನ್, ಚೇತನ್ ನೇರವಾಗಿ ಮಡಿಕೇರಿಗೇ ತೆರಳಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.

ಈ ನಡುವೆ ನಟ ರವಿಚಂದ್ರನ್, ಚಿತ್ರೋದ್ಯಮದವರು ಒಂದಿಡೀ ಊರಿನ ಜವಾಬ್ದಾರಿ ವಹಿಸಿಕೊಂಡು, ಆ ಊರನ್ನೇ ಸಂಪೂರ್ಣವಾಗಿ ಕಟ್ಟಿಕೊಡಬೇಕು. ಬೇರೆ ಬೇರೆ ಸಂಘ ಸಂಸ್ಥೆಗಳೂ ಹೀಗೆಯೇ ಮಾಡಿದರೆ, ಮಡಿಕೇರಿಯನ್ನು ಪುನರ್‍ನಿರ್ಮಿಸುವುದು ಕಷ್ಟವೇನಲ್ಲ. ನಾವೀಗ ನೀಡುತ್ತಿರುವ ಹಣ, ವಸ್ತು, ಪರಿಹಾರ ಸಾಮಗ್ರಿಗಳೆಲ್ಲ ತಾತ್ಕಾಲಿಕ. ಅವರಿಗೆ ಶಾಶ್ವತ ವ್ಯವಸ್ಥೆ ಮಾಡಬೇಕು. ಒಬ್ಬೊಬ್ಬರೇ ಮಾಡುವ ಟೆಂಪರರಿ ಪರಿಹಾರಕ್ಕಿಂತ, ಎಲ್ಲರೂ ಸೇರಿಕೊಂಡು ಶಾಶ್ವತ ಪರಿಹಾರ ಕಲ್ಪಿಸಿಕೊಡೋಣ ಎಂದಿದ್ದಾರೆ.

ರವಿಚಂದ್ರನ್ ಸಲಹೆಗೆ ಇಡೀ ಚಿತ್ರೋದ್ಯಮ ಯೆಸ್ ಎಂದಿದೆ. ಆಲೋಚನೆ ಕಾರ್ಯಗತಗೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಮೊದಲ ಹೆಜ್ಜೆ ಇಡುವವರು ಯಾರು ಎಂಬುದೇ ಪ್ರಶ್ನೆ.

Adachanege Kshamisi Teaser Launch Gallery

Mataash Movie Gallery