` ಕೊಡಗು, ಪ್ರವಾಹ ಸಂತ್ರಸ್ತರಿಗಾಗಿ ಸ್ಯಾಂಡಲ್‍ವುಡ್ ಪ್ರಾರ್ಥನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
stars enter to save kodagu
Kodagu Floods

ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಇತಿಹಾಸ ಕಂಡು ಕೇಳರಿಯದ ಮಳೆಯಾಗುತ್ತಿದೆ. ಮನೆಗಳು ಕೊಚ್ಚಿ ಹೋಗುತ್ತಿವೆ. ಗುಡ್ಡಗಳು ಕಳಚಿ ಬೀಳುತ್ತಿವೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ರುದ್ರರೂಪ ತಾಳಿಬಿಟ್ಟಿವೆ. ಕೇರಳದಲ್ಲಿ ಶುರುವಾದ ಪ್ರವಾಹಕ್ಕೆ ಮಡಿಕೇರಿ, ಮೈಸೂರು, ಹಾಸನ, ಚಿಕ್ಕಮಗಳೂರು, ಮಂಗಳೂರು, ಕಾರವಾರ, ಹಾವೇರಿ, ಶಿವಮೊಗ್ಗ, ಬಳ್ಳಾರಿ ನಲುಗುತ್ತಿವೆ. ಇವುಗಳಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿರೋದು ಕೊಡಗು ಜಿಲ್ಲೆ. ಈಗ ಕೊಡಗು ಜಿಲ್ಲೆಯ ಸಂಕಟಕ್ಕೆ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಸ್ಪಂದಿಸುತ್ತಿದ್ದಾರೆ.

ಕಿಚ್ಚ ಸುದೀಪ್, ತಮ್ಮ ಅಭಿಮಾನಿಗಳಿಗೆ ಕೊಡಗು ಸಂತ್ರಸ್ತರಿಗೆ ನೆರವಾಗಿ ಎಂದು ಮನವಿ ಮಾಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಸಹಾಯ ನೀಡುವುದೇ ನನಗೆ ನೀವು ನೀಡುವ ದೊಡ್ಡ ಉಡುಗೊರೆ ಎಂದಿದ್ದಾರೆ ಸುದೀಪ್. ಸುದೀಪ್ ಮನವಿಗೆ ಸ್ಪಂದಿಸಿರುವ ಹಲವಾರು ಸುದೀಪ್ ಅಭಿಮಾನಿ ಸಂಘಟನೆಗಳು ಕೊಡಗು ಪ್ರವಾಹ ಸಂತ್ರಸ್ತರಿಗೆ ಆಹಾರ, ನೀರು ಮೊದಲಾದ ತುರ್ತು ಅಗತ್ಯ ಪೂರೈಸಲು ಹೊರಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಅಷ್ಟೆ, ತಮ್ಮ ಗೆಳೆಯರು ಅಭಿಮಾನಿ ಸಂಘಟನೆಗಳ ಮೂಲಕವೇ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ. 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಮನವಿ ಮೇರೆಗೆ ಅವರ ಅಭಿಮಾನಿ ಸಂಘಟನೆಗಳೂ ಸಂತ್ರಸ್ತರ ನೆರವಿಗೆ ಧಾವಿಸಿವೆ. ಚಂದ್ರಾ ಲೇಔಟ್‍ನಲ್ಲಿರುವ ಡಾ.ರಾಜ್ ಅಕಾಡೆಮಿ ಸಂತ್ರಸ್ತರಿಗೆ ತುರ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಸಂತ್ರಸ್ತರಿಗೆ ನೀಡುತ್ತಿದೆ. ಆದರೆ, ಯಾವುದೇ ನಗದು ಅಥವಾ ಚೆಕ್ ಮೂಲಕ ಧನ ಸಹಾಯ ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.

ಕೇರಳ ಪ್ರವಾಹ ಸಂತ್ರಸ್ತರಿಗೆ ಪುನೀತ್ ರಾಜ್‍ಕುಮಾರ್ ವೈಯಕ್ತಿಕವಾಗಿ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇನ್ನೂ ಹೆಚ್ಚು ಹೆಚ್ಚು ನೆರವಿನ ಅಗತ್ಯ ಇದೆ.

Yajamana Movie Gallery

Bazaar Movie Gallery