ನೀನಾಸಂ ಸತೀಶ್ ಅವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಅಯೋಗ್ಯ ಸ್ಪೆಷಲ್. ಏಕೆ ಗೊತ್ತಾ..? ಇಷ್ಟು ದೊಡ್ಡ ಮಟ್ಟದಲ್ಲಿ ಸತೀಶ್ ಅವರ ಹಿಂದಿನ ಯಾವ ಸಿನಿಮಾಗಳೂ ತೆರೆ ಕಂಡಿರಲಿಲ್ಲ.
ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಯೋಗ್ಯ ರಿಲೀಸ್ ಆಗುತ್ತಿದೆ. ದೇಶದ 16 ರಾಜ್ಯಗಳಲ್ಲಿ ಹಾಗೂ 66 ದೇಶಗಳಲ್ಲಿಏಕಕಾಲಕ್ಕೆ ರಿಲೀಸ್ ಆಗುತ್ತಿರುವುದು ಅಯೋಗ್ಯನ ದಾಖಲೆ.
ಸಿನಿಮಾ ಶುರುವಾಗಿ ಹೆಚ್ಚೂ ಕಡಿಮೆ 1 ವರ್ಷವಾಗಿದೆ. ಚಿತ್ರದ 4 ಹಾಡುಗಳೂ ಹಿಟ್ ಆಗಿವೆ. ಸಾಮಾನ್ಯವಾಗಿ ಸಿನಿಮಾದ ಒಂದು ಹಾಡು ಹಿಟ್ ಆದರೆ ಸಾಕು, ಚಿತ್ರತಂಡ ಹ್ಯಾಪಿಯಾಗಿಬಿಡುತ್ತೆ. ಆದರೆ, ಅಯೋಗ್ಯನ 4 ಹಾಡುಗಳೂ ಹಿಟ್ ಆಗಿರುವುದು ಚಿತ್ರತಂಡಕ್ಕೆ ಡಬಲ್ ಖುಷಿ. ಜೊತೆಗೆ ಚಿತ್ರದ ಮೂಲಕ ಸತೀಶ್, ಮತ್ತೊಮ್ಮೆ ಮಂಡ್ಯ ಸ್ಟೈಲ್‍ಗೆ ವಾಪಸ್ ಆಗಿದ್ದಾರೆ.
ಸಿನಿಮಾದಲ್ಲಿರೋದು ಹಳ್ಳಿಯ ಕಥೆ. ಬಚ್ಚೇಗೌಡ ಮತ್ತು ಸಿದ್ದೇಗೌಡ ಎಂಬ ಇಬ್ಬರ ಫೈಟಿಂಗ್ ಸ್ಟೋರಿ. ರವಿಶಂಕರ್ ಮತ್ತು ನೀನಾಸಂ ಸತೀಶ್... ಮುಖಾಮುಖಿಯಾಗಿರೋದು ಇದೇ ಮೊದಲು. ರಚಿತಾ ರಾಮ್ ಜೊತೆ ನೀನಾಸಂ ಸತೀಶ್ ಕೂಡಾ ಇದೇ ಮೊದಲು. ನಿರ್ದೇಶಕ ಮಹೇಶ್ ಕುಮಾರ್‍ಗೆ ಇದು ಫಸ್ಟ್ ಸಿನಿಮಾ.
ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಅಯೋಗ್ಯ ಚಿತ್ರದ ಕಥೆಯನ್ನು ಇಷ್ಟಪಟ್ಟು, ಅದ್ಧೂರಿಯಾಗಿ ನಿರ್ಮಿಸಿರುವ ಜೊತೆಯಲ್ಲೇ ಅದ್ಧೂರಿಯಾಗಿ ತೆರೆಗೂ ತರುತ್ತಿದ್ದಾರೆ.