ಅಯೋಗ್ಯ ಅಂದ್ರೆ ಏನು..? ಒಂದು ಸಿನಿಮಾಗೆ ಆ ಹೆಸರು ಯಾಕಿಟ್ರು..? ಅದಕ್ಕೆ ನೀನಾಸಂ ಸತೀಶ್ ಕಾರಣ ಕೊಟ್ಟಿದ್ದಾರೆ. ಸರಿಯಾಗಿ ಕೆಲಸ ಮಾಡಿ, ತಿಂಗ್ಳಾ ತಿಂಗ್ಳು ಸಂಬಳ ತೆಗೆದುಕೊಳ್ಳೋವ್ರು ಯೋಗ್ಯರು. ಪಟ್ಟಾಂಗ ಹೊಡ್ಕೊಂಡು ತಿರುಗುವವರು ಅಯೋಗ್ಯರು. ಈ ಚಿತ್ರದಲ್ಲಿ ಅಯೋಗ್ಯ, ಚಿತ್ರದ ಹೀರೋ ನೀನಾಸಂ ಸತೀಶ್.
ನಾನು ಮಂಡ್ಯ ಸ್ಟೈಲ್‍ನಲ್ಲಿ ಸಿನಿಮಾ ಮಾಡಿದಾಗಲೆಲ್ಲ ಗೆದ್ದಿದ್ದೇನೆ. ಜನ ಗೆಲ್ಲಿಸಿದ್ದಾರೆ. ಹೀಗಾಗಿ ಅಯೋಗ್ಯ ಚಿತ್ರ ಕೂಡಾ ಸ್ಪೆಷಲ್ ಆಗಿ ಇಷ್ಟವಾಗುತ್ತೆ. ರಚಿತಾ ರಾಮ್ ಮತ್ತು ನನ್ನ ಕಾಂಬಿನೇಷನ್‍ನ್ನು ಜನ ಖಂಡಿತಾ ಇಷ್ಟಪಡ್ತಾರೆ ಅನ್ನೋದು ಹೀರೋ ನೀನಾಸಂ ಸತೀಶ್ ಮಾತು.
ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್‍ಗೂ ಮುನ್ನ ಹಾಡುಗಳು ಹಿಟ್ ಆಗಿರುವುದು ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ. ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಚಂದ್ರಶೇಖರ್. ಸತತವಾಗಿ ಹಿಟ್ ಕೊಡುತ್ತಾ ಬಂದಿರುವ ಚಂದ್ರಶೇಖರ್, ಈ ಚಿತ್ರದಲ್ಲೂ ಗೆಲುವು ಎದುರು ನೋಡುತ್ತಿದ್ದಾರೆ.