` ವ್ಹಾವ್.. ವಾಟ್ ಎ ಫಿಲಂ.. ಇದು ಕಿಚ್ಚನ ಕರಾಳ ರಾತ್ರಿ ವಿಮರ್ಶೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kiccha sudeep appreciates karala ratri
Kiccha Sudeep Watches Aa Karala Ratri

ಕರಾಳ ರಾತ್ರಿ. ದಯಾಳ್ ಪದ್ಮನಾಭ್ ನಿರ್ದೇಶನದ ಸಿನಿಮಾ ಸೈಲೆಂಟ್ ಆಗಿ ಹಿಟ್ ಆದ ಚಿತ್ರ. ಜಯಕೀರ್ತಿ, ಅನುಪಮಾ ಗೌಡ, ರಂಗಾಯಣ ರಘು ನಟಿಸಿದ್ದ ಚಿತ್ರ, ಬಿಡುಗಡೆಯಾದ ಮೇಲೆ ಹಂತ ಹಂತವಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾ ಹೋಯ್ತು. ಈಗ 25 ದಿನಗಳ ಯಶಸ್ವೀ ಪ್ರದರ್ಶನ ಮುಗಿಸಿ ಮುನ್ನುಗ್ಗುತ್ತಿದೆ.

ಜೆಕೆ, ಕಿಚ್ಚ ಸುದೀಪ್‍ರ ಆತ್ಮೀಯ ಗೆಳೆಯ. ಗೆಳೆಯನ ಚಿತ್ರವೊಂದು ಸಕ್ಸಸ್ ಕಾಣುತ್ತಿರುವ ಖುಷಿಗೆ, ಚಿತ್ರವನ್ನು ನೋಡಿರುವ ಸುದೀಪ್, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

ಜೆಕೆ, ಸಿನಿಮಾವನ್ನು ನನಗೆ ತೋರಿಸಲು ಇಷ್ಟಪಟ್ಟಿದ್ದರು. ಸಮಯ ಹೊಂದಿಸಿಕೊಳ್ಳೋಕೆ ಆಗಲಿಲ್ಲ. ಚಿತ್ರವನ್ನು ನೋಡಿದಾಗ ಥ್ರಿಲ್ ಆಗಿ ಹೋದೆ. ಅತ್ಯಂತ ಕಡಿಮೆ ಪಾತ್ರಗಳು, ಪ್ರತಿಕ್ಷಣವೂ ನಮ್ಮನ್ನು ಚಿತ್ರದೊಳಗೆ ಕೂರಿಸಿಕೊಳ್ಳುವ ಚಿತ್ರಕಥೆ, ಸತ್ಯ ಗೊತ್ತಾದಾಗ ನಮ್ಮನ್ನು ಬೆಚ್ಚಿಬೀಳಿಸುತ್ತೆ. ಸೀಟ್‍ನ ತುದಿಗೆ ಕೂರುವಂತೆ ಮಾಡುತ್ತೆ.ಇಂಥಾದ್ದೊಂದು ಚಿತ್ರದಲ್ಲಿ ನಟಿಸಿದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಎಲ್ಲರಿಗೂ ಹ್ಯಾಟ್ಸಾಫ್.

ರಂಗಾಯಣ ರಘು, ಕನ್ನಡ ಚಿತ್ರರಂಗಕ್ಕೆ ದೊಡ್ಡದೊಂದು ಉಡುಗೊರೆ. ಅದು ಈ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವೀಣಾ ಸುಂದರ್ ಅಭಿನಯವಂತೂ ವಂಡರ್‍ಫುಲ್. ಅನುಪಮಾ ಅವರದ್ದಂತೂ 100 ಚಿತ್ರಗಳಲ್ಲಿ ನಟಿಸಿರುವ ಕಲಾವಿದರಂತೆ ಪ್ರಬುದ್ಧರಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಕಠಿಣ ಸವಾಲು ಸ್ವೀಕರಿಸಿ ಗೆದ್ದಿದ್ದಾರೆ. ಆಕೆಗೆ ಅತ್ಯುತ್ತಮ ಭವಿಷ್ಯವಿದೆ. ಇನ್ನು ಜೆಕೆ, ಈ ಚಿತ್ರದಲ್ಲಿ ನನಗೂ ಸರ್‍ಪ್ರೈಸ್ ಕೊಟ್ಟಿದ್ದಾರೆ. ಅವರ ಇನ್‍ವಾಲ್ವ್‍ಮೆಂಟ್, ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುವ ರೀತಿ ಅಮೋಘ.

ನಿರ್ದೇಶಕ ದಯಾಳ್.. ಅವರಂತೂ ಎಕ್ಸಲೆಂಟ್. ಬೂದುಗನ್ನಡಿ ಹಾಕಿಕೊಂಡು ತಪ್ಪು ಹುಡುಕೋಣ ಎಂದು ಕೊಂಡೆ. ಝೂಮ್ ಲೆನ್ಸ್ ಫೇಲ್ ಆಯ್ತು. ಕಂಗ್ರಾಟ್ಸ್ ದಯಾಳ್. ನಾರಾಯಣ್ ಅವರ ಹಿನ್ನೆಲೆ ಸಂಗೀತವಂತೂ ಅದ್ಭುತ.

ಯಾವುದೇ ಸಿನಿಮಾ ನೋಡಿದಾಗ ಅದು ಕಂಪ್ಲೀಟ್ ಎನಿಸುವುದಿಲ್ಲ. ಯಾವುದಾದರೊಂದು ಸಣ್ಣ ತಪ್ಪಾದರೂ ಕಾಣಿಸುತ್ತೆ. ಆದರೆ, ಈ ಚಿತ್ರವನ್ನು ನೋಡಿ. ವ್ಹಾವ್.. ವ್ಹಾಟ್ ಎ ಫಿಲ್ಮ್ ಅಂತೀರಿ.

ಇದು ಕಿಚ್ಚ ಸುದೀಪ್ ಕರಾಳ ರಾತ್ರಿಗೆ ಬರೆದಿರುವ ವಿಮರ್ಶೆ. ಸಿನಿಮಾ ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ ಅನ್ನೋದು ಸುದೀಪ್ ಮಾತು. 

#

Ayushmanbhava Movie Gallery

Damayanthi Audio and Trailer Launch Gallery