Print 
bhaktavatsala,

User Rating: 0 / 5

Star inactiveStar inactiveStar inactiveStar inactiveStar inactive
 
producer distributor bhaktavatsala
M Bhaktavatsala

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಂ. ಭಕ್ತವತ್ಸಲ ನಿಧನರಾಗಿದ್ದಾರೆ. ಎಂ.ಎಸ್. ಸತ್ಯು ನಿರ್ದೇಶನದಲ್ಲಿ ಕನ್ನೇಶ್ವರ ರಾಮ, ಸಂಧ್ಯಾರಾಗ, ಸಂಸ್ಕಾರ ಮೊದದಾದ ಚಿತ್ರಗಳನ್ನು ನಿರ್ಮಿಸಿದ್ದ ಭಕ್ತವತ್ಸಲ, ಹಲವಾರು ಚಿತ್ರಗಳಿಗೆ ವಿತರಕರಾಗಿದ್ದರು. ಚಂಡಮಾರುತ ಎಂಬ ಚಿತ್ರದಲ್ಲಿ ನಟರಾಗಿಯೂ ಕೆಲಸ ಮಾಡಿದ್ದರು. ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಏಕೈಕ ಕನ್ನಡಗಿ ಭಕ್ತವತ್ಸಲ.

ಭಕ್ತವತ್ಸಲ ಅವರಿಗೆ ರಾಜ್ಯ ಸರ್ಕಾರ ರಾಜ್‍ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಭಕ್ತವತ್ಸಲ ನಿಧನಕ್ಕೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವೆ ಜಯಮಾಲಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles :-

Veteran M Bhaktavatsalam No More