` ರಿಯಲ್ ಕ್ರೇಜಿ ಕಾಂಬಿನೇಷನ್‍ಗೆ ಅಣ್ಣಾವ್ರ ಸಿನಿಮಾ ಟೈಟಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravi chandran movie title
Ravichandran, Upendra Image

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‍ನ ಸಿನಿಮಾ ಆಗಸ್ಟ್ 20ಕ್ಕೆ ಸೆಟ್ಟೇರುತ್ತಿದೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ ಚಿತ್ರ. ಚಿತ್ರ ತೆಲುಗಿನ ಬಲುಪು ಚಿತ್ರದ ರೀಮೇಕ್ ಎನ್ನಲಾಗಿದ್ದು, ರವಿತೇಜ ಪಾತ್ರದಲ್ಲಿ ಉಪೇಂದ್ರ ಹಾಗೂ ಪ್ರಕಾಶ್ ರೈ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಈಗ ಚಿತ್ರಕ್ಕೆ ರವಿಚಂದ್ರ ಅನ್ನೋ ಟೈಟಲ್ ಫೈನಲ್ ಮಾಡಿದ್ದಾರೆ.

ರವಿಚಂದ್ರ, ಡಾ.ರಾಜ್ ಅಭಿನಯಿಸಿದ್ದ ಸಿನಿಮಾ. ಡಾ.ರಾಜ್, ಲಕ್ಷ್ಮಿ ನಟಿಸಿದ್ದ ಚಿತ್ರ. ರಾಜ್ ದ್ವಿಪಾತ್ರದಲ್ಲಿ ನಟಿಸಿದ್ದರು. ಸುಮಲತಾ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಇದೇ ಸಿನಿಮಾದ ಮೂಲಕ. 1980ರಲ್ಲಿ ರಿಲೀಸ್ ಆಗಿದ್ದ ಆ ಚಿತ್ರಕ್ಕೆ ಎ.ವಿ.ಶೇಷಗಿರಿರಾವ್ ನಿರ್ದೇಶಕರು. ಈಗ.. 2018ರಲ್ಲಿ ಸೆಟ್ಟೇರುತ್ತಿರುವ ಈ ಚಿತ್ರಕ್ಕೆ ಓಂಪ್ರಕಾಶ್ ರಾವ್ ನಿರ್ದೇಶಕರು. ಕನಕಪುರ ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery