ಕಥೆಯೊಂದು ಶುರುವಾಗಿದೆ.. ದಿಗಂತ್, ಪೂಜಾ ದೇವರಿಯಾ ಅಭಿನಯದ ಈ ಸಿನಿಮಾದ ಕಥೆ ಶುರುವಾಗಿಯೇಬಿಟ್ಟಿದೆ. ವಿದೇಶಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸಿನಿಮಾ, ಪ್ರೀಮಿಯರ್ ಶೋನಲ್ಲಿಯೂ ಚಿತ್ರಪ್ರೇಮಿಗಳ ಮನ ಗೆದ್ದಿದೆ. ಈಗ.. ಕನ್ನಡಿಗರ ಮನ ಗೆಲ್ಲೋ ಗುರಿ.
ಚಿತ್ರದ ಕಥೆ ಡಿಫರೆಂಟ್ ಮತ್ತು ವಿಶೇಷವಾಗಿದೆ. ನಾನು ಸಿನಿಮಾ ನೋಡಿದ್ದೇನೆ. ನನಗಂತೂ ಇಷ್ಟವಾಗಿದೆ. ಮೂರು ವರ್ಗದವರ ಪ್ರೇಮಕಥೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ. ಒಂದೊಳ್ಳೆ ಸಿನಿಮಾಗೆ ಹಣ ಹೂಡಿದ ತೃಪ್ತಿ ನನ್ನದು. ಇದು ನಿರ್ಮಾಪಕ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ.
ಯುವಕರು, ಮಧ್ಯವಯಸ್ಕರು, ವೃದ್ಧರು ಎಲ್ಲರಿಗೂ ಇಷ್ಟವಾಗುವ ಕಥೆ ಚಿತ್ರದಲ್ಲಿದೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ಇನ್ನೊಬ್ಬ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಚಿತ್ರ, ಪ್ರೇಕ್ಷಕರ ಎದೆಯಲ್ಲಿ ಲವ್ ಯೂ ಹೇಳುತ್ತಿದೆ.