ವಾಸು ನಾನ್ ಪಕ್ಕಾ ಕಮರ್ಷಿಯಲ್. ನಾಳೆ ರಿಲೀಸಾಗುತ್ತಿರುವ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ಸ್ಟಾರ್‍ಗಳ ಸಪೋರ್ಟ್ ಸಿಕ್ಕಿದೆ. ಕಿಚ್ಚ ಸುದೀಪ್, ಚಿತ್ರದ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರದ ಹಾಡುಗಳು ಹಾಗೂ ಚಿತ್ರದ ರಿಲೀಸ್ ಡೇಟ್‍ನ್ನು ಚಾಲೆಂಜಿಂಗ್ ಸ್ಟಾರ್ ಅನೌನ್ಸ್ ಮಾಡಿದ್ದರು.ಅಷ್ಟೇ ಅಲ್ಲ, ಚಿತ್ರದ ಒಂದು ಹಾಡನ್ನು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿದ್ದಾರೆ.
ಹೀಗೆ ಪುನೀತ್, ದರ್ಶನ್ ಹಾಗೂ ಸುದೀಪ್.. ಚಿತ್ರತಂಡದ ಜೊತೆಯಲ್ಲಿರೋದು ಬಿಡುಗಡೆ ಖುಷಿಯಲ್ಲಿರುವ ಚಿತ್ರತಂಡದ ಕಾನ್ಫಿಡೆನ್ಸ್ ಹೆಚ್ಚಿಸಿರುವುದು ಸುಳ್ಳಲ್ಲ. ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಚಿತ್ರಕ್ಕೆ ಅಜಿತ್ ವಾಸನ್ ಉಗ್ಗಿನ ನಿರ್ದೇಶಕ.