ಕಥೆಯೊಂದು ಶುರುವಾಗಿದೆ ಚಿತ್ರ ವಿದೇಶಗಳಲ್ಲೊಂದು ಸುತ್ತು ಪ್ರಯಾಣ ಮುಗಿಸಿ, ಕರ್ನಾಟಕಕ್ಕೆ ಬಂದಿದೆ. ನಾಳೆ (ಆಗಸ್ಟ್ 2) ಚಿತ್ರದ ಪ್ರೀಮಿಯರ್ ಶೋ ಬೆಂಗಳೂರಿನ ಜಿಟಿ ಮಾಲ್‍ನಲ್ಲಿ ಪ್ರೀಮಿಯರ್ ಶೋ ಇದೆ. ಈ ಪ್ರೀಮಿಯರ್ ಶೋ ಪ್ರೇಮಿಗಳಿಗಾಗಿ ಎಂದು ಷರತ್ತು ಹಾಕಿತ್ತು ಚಿತ್ರತಂಡ. ಸಾವಿರಾರು ಮಂದಿ ಪ್ರೇಮಿಗಳು ತಮ್ಮ ತಮ್ಮ ಲವ್‍ಸ್ಟೋರಿಗಳನ್ನು ವಿಡಿಯೋ ಮಾಡಿ ಕಳಿಸಿದ್ದಾರೆ. ಹಾಗೆ ಕಳುಹಿಸಿದವರಲ್ಲಿ 25 ಪ್ರೇಮಜೋಡಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ.
ಅಮೆರಿಕ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳಲ್ಲಿ 11 ಪ್ರೀಮಿಯರ್ ಶೋ ಮುಗಿಸಿ ಬಂದಿರುವ ಚಿತ್ರತಂಡ ನಾಳೆ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಇಟ್ಟುಕೊಂಡಿದೆ. ಹೀಗೆ ವಿಭಿನ್ನ ವಯೋಮಾನದ ಜೋಡಿಗಳನ್ನು ಆಯ್ಕೆ ಮಾಡಿಕೊಳ್ಳೋಕೆ ಕಾರಣ, ಚಿತ್ರದ ಕಥೆ.
ಚಿತ್ರದಲ್ಲಿ ದಿಗಂತ್, ಪೂಜಾ ದೇವರಿಯಾ, ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಸೇರಿದಂತೆ ನಾಲ್ಕು ವಯೋಮಾನದ ಪ್ರೇಮಜೋಡಿಗಳ ಕಥೆಯಿದೆ. ಹೀಗಾಗಿ.. ಇದು ಪ್ರೇಮಿಗಳಿಗಾಗಿ.. ಪ್ರೀತಿಸುವವರಿಗಾಗಿ.. ವಯಸ್ಸು.. ಎಷ್ಟೇ ಇರಲಿ.. ಪ್ರೀತಿ ಮಾಡ್ತಿರೋದು ಮುಖ್ಯ.