ಎಂದೆಂದೂ ನಿನಗಾಗಿ, ನನ್ ಲೈಫಲ್ಲಿ, ಮಾಂಜಾ, ಪೊಲೀಸ್ ಕ್ರಾರ್ಟರ್ಸ್, ಅಕಿರಾ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಅನೀಶ್‍ಗೆ ಮೆಚ್ಚುಗೆ ಸಿಕ್ಕಿದ್ದವು. ಅನೀಶ್‍ಗೆ ಒಳ್ಳೆಯ ಭವಿಷ್ಯವಿದೆ, ಒಳ್ಳೆಯ ಕಲಾವಿದ ಎಂದಿತ್ತು ಚಿತ್ರರಂಗ. ಆದರೆ, ಕಮರ್ಷಿಯಲ್ ಸಕ್ಸಸ್ ಸಿಕ್ಕಿರಲಿಲ್ಲ. ಈಗ ಆ ಕಮರ್ಷಿಯಲ್ ಸಕ್ಸಸ್‍ನ್ನು ತಾವೇ ಹುಡುಕಿಕೊಂಡಿದ್ದಾರೆ ಅನೀಶ್ ತೇಜೇಶ್ವರ್.
ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರವನ್ನು ತಾವೇ ನಿರ್ಮಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಕ್ವಾಟ್ಲೆ, ಕೀಟಲೆ, ತರ್ಲೆ, ತಮಾಷೆ, ಒಂದು ಒಳ್ಳೆ ಲವ್ ಸ್ಟೋರಿ ಎಲ್ಲವೂ ಇದೆ.
ಆಸ್ತಿಯೆಲ್ಲ ನಾಯಿಗೆ ಬರೀತಾನಂತೆ ಅಪ್ಪ.. , ನೋಡ್ತಾ ಇರು, ನನ್ ಅಪ್ಪ ಯಾರು ಅಂತಾ ಯಾರಿಗೂ ಗೊತ್ತಾಗಬಾರದು, ಆ ಲೆವೆಲ್ಲಿಗೆ ಬೆಳೀತೀನಿ.. ಅನ್ನೋ ಟ್ರೇಲರ್‍ನಲ್ಲಿದ್ದ ಡೈಲಾಗುಗಳು ಪ್ರೇಕ್ಷಕರಲ್ಲಿ ನಗು ಅರಳಿಸಿವೆ. ಅಮ್ಮ ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. ಹಾಗೆ ನೋಡಿದ್ರೆ, ನಿಶ್ವಿಕಾರ ಮೊದಲ ಚಿತ್ರ ವಾಸು ನಾನ್ ಪಕ್ಕಾ ಕಮರ್ಷಿಯಲ್.
ಅಜಿತ್ ವಾಸನ್ ನಿರ್ದೇಶನದ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ವಾಸು ಅದೃಷ್ಟ ಅರ್ಥಾತ್ ಅನೀಶ್ ಅದೃಷ್ಟ ಖುಲಾಯಿಸುತ್ತಾ..?