ಅಯೋಗ್ಯ.. ನೀನಾಸಂ ಸತೀಶ್-ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಸಿನಿಮಾ. ಈ ಸಿನಿಮಾದ ಹಾಡುಗಳ ಬಗ್ಗೆ ಸತೀಶ್ ಆರಂಭದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರಂತೆ. ಆಗ ಅರ್ಜುನ್ ಜನ್ಯಾ ``ಸತೀಶ್, ನೀವು ಆರಾಮವಾಗಿರಿ, ತಲೆ ಕೆಡಿಸಿಕೊಳ್ಳಬೇಡಿ. ಹಾಯಾಗಿ ನಿದ್ದೆ ಮಾಡಿ'' ಎಂದಿದ್ದರಂತೆ. ಅವರು ಅಷ್ಟು ಕಾನ್ಫಿಡೆನ್ಸ್ ಆಗಿ ಹೇಳಿದ್ದು ಹೇಗೆ ಅನ್ನೋದು ಗೊತ್ತಾಗಿದ್ದು ಹಾಡುಗಳು ಹೊರಬಂದ ಮೇಲೆ. ಏಕೆಂದರೆ, ಅಯೋಗ್ಯ ಚಿತ್ರದ ಹಾಡುಗಳೆಲ್ಲ ದಾಖಲೆ ಬರೆಯುತ್ತಿವೆ.
ಏನಮ್ಮಿ ಏನಮ್ಮಿ ಹಾಡು.. ಡಬ್‍ಸ್ಮಾಶ್‍ನಲ್ಲೂ ದಾಖಲೆ ಬರೆದಿದೆ. ಹಿಂದೆ ಹಿಂದೆ ಹೋಗು ಹಾಡು ಕೂಡಾ ಸೂಪರ್ ಡ್ಯೂಪರ್ ಹಿಟ್. ಟಾಪ್ 10 ಹಾಡುಗಳ ಲಿಸ್ಟ್‍ನಲ್ಲಿ ಅಯೋಗ್ಯನ ಹಾಡುಗಳು ಖಾಯಂ ಆಗಿವೆ.
ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ. ಈ ಹಿಂದೆ ನನ್ನ ಬೇರ್ಯಾವ ಚಿತ್ರದ ಮೇಲೂ ನಾನು ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಾಡು ಹಿಟ್ ಆಗಿರೋದು ನೋಡಿದ್ರೆ, ಈ ಸಿನಿಮಾ ಪವಾಡ ಸೃಷ್ಟಿಸಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಅಂತಾರೆ ಸತೀಶ್.
ಚಮಕ್ ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡುವಾಗ ತಮಗೆ ತಾವೇ ಕನೆಕ್ಟ್ ಆಗುತ್ತಾರೆ ಅನ್ನೋದು ಸತೀಶ್ ವಿಶ್ವಾಸ.