ಒಂದಲ್ಲಾ.. ಎರಡಲ್ಲಾ.. ರಾಮಾ ರಾಮಾ ರೇ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನದ ಹೊಸ ಸಿನಿಮಾ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಬ್ಯಾನರ್‍ನ ಚಿತ್ರ. ಚಿತ್ರೀಕರಣ ಮುಗಿಸಿಕೊಂಡಿರುವ ಸಿನಿಮಾ, ರಿಲೀಸ್‍ಗೆ ರೆಡಿಯಾಗಿದೆ. ಬಿಡುಗಡೆ ಸಿದ್ಧತೆಯ ಭಾಗವಾಗಿ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ ಸಂತಸ ಹಂಚಿಕೊಂಡಿದೆ.
ವಾಸುಕಿ ವೈಭವ್ ನಿರ್ದೇಶನದಲ್ಲಿ ಹಾಡುಗಳು ಅದ್ಭುತವಾಗಿ ಬಂದಿವೆ. ಲವಲವಿಕೆ, ತುಂಟತನ, ವೇದಾಂತ ಎಲ್ಲವೂ ಮಿಶ್ರಿತವಾಗಿರುವ ಚಿತ್ರದ ಚುಟುಕು ಗೀತೆಗಳು ಇಷ್ಟವಾಗುವಂತಿವೆ.
ರಾಮಾ ರಾಮಾ ರೇ ಚಿತ್ರದಲ್ಲಿದ್ದ ಕಲಾವಿದರಷ್ಟೇ ಚಿತ್ರದಲ್ಲಿ ಇಲ್ಲ. ತಂತ್ರಜ್ಞರೆಲ್ಲರೂ ಅವರೇ ಇದ್ದಾರೆ. ರೋಹಿತ್ ಎಂಬ ಹುಡುಗ ಪ್ರಧಾನ ಪಾತ್ರಧಾರಿ. ತುಳು ಚಿತ್ರರಂಗದ ಸಾಯಿಕೃಷ್ಣ ಕುಡ್ಲ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ ಎಂದು ವಿವರ ನೀಡಿದ್ದಾರೆ ಸತ್ಯಪ್ರಕಾಶ್.
ಈ ಚಿತ್ರ ನನ್ನ ಆತ್ಮತೃಪ್ತಿಗಾಗಿ. ಹಣ, ಹೆಸರು ಮಾಡುವ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ. ಒಂದೊಳ್ಳೆಯ ಸಿನಿಮಾ ಮಾಡಬೇಕು ಎಂಬ ಬದ್ಧತೆಯಿಂದ ಈ ಸಿನಿಮಾ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ.