` ಸಿನಿಮಾ ರಿಲೀಸ್ ಘೋಷಣೆಯಲ್ಲೇ ಅದ್ದೂರಿ ದರ್ಶನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vasu nan pakka commercial release date announced
Darshan, Anish Tejeshwar Image

ವಾಸು ನಾನ್ ಪಕ್ಕಾ ಕಮರ್ಷಿಯಲ್. ಇದೇ ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ. ಆಡಿಯೋ, ಟೀಸರ್, ಟ್ರೇಲರ್ ಬಿಡುಗಡೆಗೆ ಅದ್ದೂರಿ ಕಾರ್ಯಕ್ರಮ ಮಾಡೋದು ನೋಡಿದ್ದೀರಿ. ಕೇಳಿದ್ದೀರಿ. ಆದರೆ, ಈ ವಾಸು ಪಕ್ಕಾ ಕಮರ್ಷಿಯಲ್. ಹೀಗಾಗಿ ಚಿತ್ರ ಬಿಡುಗಡೆ ದಿನಾಂಕ ಘೋಷಿಸೋಕೆಂದೇ ಅದ್ಧೂರಿ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್.

ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು ದರ್ಶನ್.

ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು ಪ್ರಮುಖ ಭೂಮಿಕೆಯಲ್ಲಿರೋ ಚಿತ್ರಕ್ಕೆ, ಅಜಿತ್ ಉಗ್ಗಿನ್ ವಾಸನ್ ನಿರ್ದೇಶನವಿದೆ. ರಿಲೀಸ್ ಡೇಟ್ ಘೋಷಣೆ ಕಾರ್ಯಕ್ರಮದಲ್ಲಿ ಅನುಷಾ ರಂಗನಾಥ್, ಅನಿತಾ ಭಟ್, ಕೃಷಿ ತಾಪಂಡ ಹಾಡಿ ಕುಣಿದರು. ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿಯರು ಹಿಪ್‍ಹಾಪ್ ಡ್ಯಾನ್ಸ್ ಪ್ರದರ್ಶಿಸಿದರು. ಯಶವಂತ ಎಂಬ ಯುವಕ ಯೋಗಾಸನಗಳ ವಿವಿಧ ಭಂಗಿಗಳ ಪ್ರದರ್ಶನ ನೀಡಿದ್ರು.

Yajamana Movie Gallery

Bazaar Movie Gallery