` ಕಿಚ್ಚ ಸುದೀಪ್, ಶ್ರೀರಾಮುಲು ಭೇಟಿ ಮತ್ತು ಮೋದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mla sriramulu meets sudeep
Sriramulu, Sudeep Image

ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಂತೆ ಅನ್ನೋದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ, ಸುದೀಪ್, ವ್ಯಕ್ತಿಗತವಾಗಿ ಪ್ರಚಾರಕ್ಕೆ ಹೋದರೇ ಹೊರತು, ಯಾವುದೇ ರಾಜಕೀಯ ಪಕ್ಷದ ಒಲವು ತೋರಲಿಲ್ಲ. ಮೊಳಕಾಲ್ಮೂರಿನಲ್ಲಿ ಬಿಜೆಪಿಯಿಂದ ನಿಂತಿದ್ದ ಶ್ರೀರಾಮುಲು ಪರ ಕೂಡಾ ಪ್ರಚಾರ ಮಾಡಿದ್ದರು. ಈಗ.. ಚುನಾವಣೆ ಮುಗಿದ ನಂತರ ಶ್ರೀರಾಮುಲು ದಿಢೀರನೆ ಸುದೀಪ್ ಅವರನ್ನು ಭೇಟಿ ಮಾಡಿ, ಅಚ್ಚರಿ ಮೂಡಿಸಿದ್ದಾರೆ.

ಹಾಗಂತ, ಇದು ಸುದೀಪ್ ಅವರನ್ನು ಬಿಜೆಪಿಗೆ ಆಹ್ವಾನಿಸುವ ವಿಷಯ ಎಂದುಕೊಳ್ಳಬೇಡಿ. ಕೇಂದ್ರದಲ್ಲಿರೋ ಮೋದಿ ಸರ್ಕಾರ 4 ವರ್ಷ ಪೂರೈಸಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಎದುರಾಗುತ್ತಿದೆ. ಮೋದಿ ಸರ್ಕಾರದ ಸಾಧನೆಗಳ ಒಂದು ಪುಸ್ತಕವನ್ನೇ ರೂಪಿಸಿರು ಬಿಜೆಪಿ, ಆ ಪುಸ್ತಕವನ್ನು ಸೆಲಬ್ರಿಟಿಗಳಿಗೂ ನೀಡುತ್ತಿದೆ. 

ಈ ಅಭಿಯಾನದಲ್ಲಿ ಶ್ರೀರಾಮುಲು, ಸುದೀಪ್ ಅವರನ್ನು ಭೇಟಿ ಮಾಡಿ ಆ ಪುಸ್ತಕ ನೀಡಿದ್ದಾರೆ. 

Shivarjun Movie Gallery

Popcorn Monkey Tiger Movie Gallery