ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಕೇವಲ 3 ಲವ್‍ಸ್ಟೋರಿಗಳಷ್ಟೇ ಅಲ್ಲ, ಜೀವನ ಸಂದೇಶವೂ ಇದೆ. ತತ್ವಜ್ಞಾನವೂ ಇದೆ. ಹರೆಯ, ಮಧ್ಯವಯಸ್ಸು ಮತ್ತು ವೃದ್ಧಾಪ್ಯದ ಪ್ರೇಮ, ಜೀವನದಲ್ಲಿ ಸೋತಿರುವ ಮನಸ್ಸುಗಳು.. ಚಿತ್ರದ ಕಥೆಯ ಪಾತ್ರಗಳು.
ರೆಸಾರ್ಟ್‍ನ ಕರೆಂಟು, ಫೋನ್ ಬಿಲ್ ಕೂಡಾ ಕಟ್ಟಲಾಗದೆ ಲಾಸಿನಲ್ಲಿರುವ ಮಾಲೀಕನಾಗಿ ದಿಗಂತ್, ಯಾವುದೋ ನೋವು ಮರೆಯಲು ರೆಸಾರ್ಟ್‍ಗೆ ಬರುವ ನಾಯಕಿ.. ಅವರಿಬ್ಬರ ನಡುವೆ ಶುರುವಾಗುವ ಬಾಂಧವ್ಯ, ಅದು ಪ್ರೇಮವಾ..? ಇಂತಹ ಕಥೆಗಳು ಮುಗಿಯುವುದೂ ಇಲ್ಲ. ಮುಗಿಯುವ ಹಂತದಲ್ಲೇ ಇನ್ನೊಂದು ಕಥೆ ಶುರುವಾಗುತ್ತೆ.
ಕಥೆಯೊಂದು ಶುರುವಾಗಿದೆ ಚಿತ್ರದ ಕಥಾ ಹಂದರವೂ ಅದೇ. ದಿಗಂತ್, ಪೂಜಾ ದೇವರಿಯಾ ಪ್ರಮುಖ ಪಾತ್ರದಲ್ಲಿರೋ ಚಿತ್ರ, ಅಬ್ಬರವಿಲ್ಲದ ಸೂಕ್ಷ್ಮ ಸಿನಿಮಾ. ಆಗಸ್ಟ್ ಮೊದಲ ವಾರದಲ್ಲಿ ತೆರೆಗೆ ಬರುತ್ತಿರುವ ಚಿತ್ರ, ಯುವ ಮನಸ್ಸುಗಳನ್ನೇ ಉದ್ದೇಶವಾಗಿಟ್ಟುಕೊಂಡು ಚಿತ್ರೀಕರಿಸಿದ ಹಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾಗೆ ಸೆನ್ನಾ ಹೆಗಡೆ ನಿರ್ದೇಶನವಿದೆ.