` ಕುಮಾರಿ 21F.. ಕುಮಾರ, ಕುಮಾರಿಯರಿಗಾಗಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kumari 21 f
Kumari1 21 F Movie Image

ಕುಮಾರಿ 21F. ಚಿತ್ರದ ಟ್ರೇಲರ್ ನೋಡಿದವರಿಗೆ ಒಂಥರಾ ಕನ್‍ಫ್ಯೂಸು. ಟ್ರೇಲರ್‍ನಲ್ಲಿ ಗುಂಡು, ತುಂಡು, ಕಾಂಡೋಮ್, ಸಿಗರೇಟು.. ಎಲ್ಲ ಬರ್ತವೆ. ಹಾಗಂತ ಚಿತ್ರದ ಕಥೆಯೂ ಹಾಗೇ ಇದ್ಯಾ..? ನೋ ಚಾನ್ಸ್. 

ದಿನಾ ಬೆಳಗ್ಗೆ ದೇವಸ್ಥಾನಕ್ಕೆ ಹೋಗೋ ಹುಡುಗಿ ತುಂಬಾ ಒಳ್ಳೆಯವಳು ಅಂದ್ಕೊಳ್ಳೋದು ಹಾಗೂ ಪಬ್‍ಗೆ ಹೋಗೋ ಹುಡುಗಿಯರೆಲ್ಲ ಕೆಟ್ಟವರು ಅಂದ್ಕೊಳ್ಳೋದು ಎರಡೂ ತಪ್ಪೇ. ಚಿತ್ರದ ಕಂಟೆಂಟೇ ಅದು. ಇನ್ನು ಸಿನಿಮಾದಲ್ಲಿ ಎದ್ದು ಕಾಣ್ತಿರೋದು ಕೇವಲ ಹೀರೋ ಹೀರೋಯಿನ್ ಬೋಲ್ಡ್ ನೆಸ್ ಅಷ್ಟೇ ಅಲ್ಲ, ಪ್ರಣಾಮ್ ಡ್ಯಾನ್ಸ್ ಕೂಡಾ.

ಅಂದಹಾಗೆ ಪ್ರಣಾಮ್, ಇಮ್ರಾನ್ ಸರ್ದಾರಿಯಾ ಅವರ ಸ್ಟೂಡೆಂಟ್ ಅಂತೆ. ಒಂದು ವರ್ಷ ಅವರ ಬಳಿ ಶಿಷ್ಯನಾಗಿದ್ದೆ. ಜೊತೆಗೆ ಅಣ್ಣನ ಶೂಟಿಂಗ್ ಸೆಟ್‍ಗಳಿಗೆ ಹೋಗಿ ಅಬ್ಸರ್ವ್ ಮಾಡಿದೆ. ಅವೆಲ್ಲವೂ ಚಿತ್ರದಲ್ಲಿ ಸಹಕಾರಿಯಾಗಿವೆ ಅಂತಾರೆ ಪ್ರಣಾಮ್.

ನಿಧಿ ಕುಶಾಲಪ್ಪ ಚಿತ್ರದ ನಾಯಕಿ. ಕುಮಾರಿ 21F.ಸಿನಿಮಾ ಆಗಸ್ಟ್‍ನಲ್ಲಿ ರಿಲೀಸ್ ಆಗುತ್ತಿದೆ

Padarasa Movie Gallery

Kumari 21 Movie Gallery