ಸುಮಂತ್. ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರ. ಲೀ ಚಿತ್ರದ ನಂತರ ಕಾಣಿಸಿಕೊಂಡಿರಲಿಲ್ಲ. ಈಗ ಟಾಲಿವುಡ್‍ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬ್ರಾಂಡ್ ಬಾಬು ಸಿನಿಮಾ ಮೂಲಕ.
ಪ್ರಭಾಕರ್ ಎಂಬುವರು ನಿರ್ದೇಶಿಸಿರುವ ಬ್ರಾಂಡ್ ಬಾಬು ಸಿನಿಮಾಗೆ ಮಾರುತಿ ಎಂಬುವವರು ಕಥೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದೊಂದು ಪಕ್ಕಾ ಮಾಸ್ ಕಾಮಿಡಿ ಸಿನಿಮಾ. ಮನೆಯವರೆಲ್ಲ ಕುಳಿತು ನೋಡುತ್ತಾ ಎಂಜಾಯ್ ಮಾಡುವಂತ ಸಿನಿಮಾ ಅಂತಾರೆ ಸುಮಂತ್. ಬಾಹುಬಲಿ ಸಿನಿಮಾಗೆ ಹಿನ್ನೆಲೆ ಸಂಗೀತ ಒದಗಿಸಿದ್ದ ಜೀವನ್ ಬಾಬು, ಈ ಚಿತ್ರಕ್ಕೆ ಸಂಗೀತ ನೀಡಿರುವುದು ವಿಶೇಷ.
ಜುಲೈ 20ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಆಗಸ್ಟ್‍ನಲ್ಲಿ ಸಿನಿಮಾ ತೆರೆ ಕಾಣಲಿದೆ.