ಮಲ್ಟಿಪ್ಲೆಕ್ಸ್ಗಳಲ್ಲಿ ತಿಂಡಿ, ತಿನಿಸುಗಳಿಗೆ ವಿಧಿಸಲಾಗುತ್ತಿರುವ ದುಬಾರಿ ದರದ ವಿರುದ್ಧ ತೆಲಂಗಾಣ ಸರ್ಕಾರ ಕೂಡಾ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಯಾವುದೇ ವಸ್ತುಗಳಿಗೆ ಎಂಆರ್ಪಿ ದರಕ್ಕಿಂತ ಹೆಚ್ಚು ದರ ವಿಧಿಸುವಂತಿಲ್ಲ ಎಂದು ಕಟ್ಟಾಜ್ಞೆ ಹೊರಡಿಸಿದೆ. ಆದೇಶವನ್ನೂ ಮೀರಿ ಹೆಚ್ಚು ದರಕ್ಕೆ ತಿಂಡಿ, ತಿನಿಸು ಮತ್ತಿತರ ವಸ್ತುಗಳನ್ನು ಮಾರಾಟ ಮಾಡಿದರೆ, ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ಕೊಟ್ಟಿದೆ. ಮಹಾರಾಷ್ಟ್ರದ ನಂತರ ಈ ನಿರ್ಧಾರ ತೆಗೆದುಕೊಂಡಿರುವ ಮತ್ತೊಂದು ರಾಜ್ಯ ತೆಲಂಗಾಣ.
ಕರ್ನಾಟಕದಲ್ಲಿಯೂ ಮಲ್ಟಿಪ್ಲೆಕ್ಸ್ ಹಗಲು ದರೋಡೆಗೆ ಬ್ರೇಕ್ ಹಾಕಬೇಕು ಎಂಬ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಪ್ರೇಕ್ಷಕರು, ಜನರಿಗಿಂತ ಮಲ್ಟಿಪ್ಲೆಕ್ಸ್ನವರೇ ಪ್ರಭಾವಿಗಳಾಗಿರುವ ಕಾರಣಕ್ಕೋ ಏನೋ, ರಾಜ್ಯ ಸರ್ಕಾರ ಈ ಕುರಿತು ಯಾವುದೇ ದಿಟ್ಟ ಹೆಜ್ಜೆ ಇಡುವ ಸೂಚನೆಗಳು ಕಾಣುತ್ತಿಲ್ಲ.
ಈ ಕುರಿತು ಶೀಘ್ರದಲ್ಲೇ ಸಭೆ ನಡೆಸುತ್ತೇನೆ ಎಂದಿದ್ದಾರೆ ಜಮೀರ್ ಅಹ್ಮದ್. ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್ಗಳಲ್ಲಿ ಹೊರಗಿನ ತಿಂಡಿ ತಿನಿಸುಗಳಿಗೆ ಅವಕಾಶ ನೀಡುವ ಕುರಿತಂತೆ ಕೋರ್ಟ್ ತೀರ್ಪು ಬಂದ ನಂತರ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಸಭೆ ಯಾವಾಗ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.