ಅಮರ್. ಅಭಿಷೇಕ್ ಅಂಬರೀಷ್ ಅಭಿನಯದ ಚೊಚ್ಚಲ ಸಿನಿಮಾ. ಈ ಸಿನಿಮಾಗೆ ತಾನ್ಯಾ ಹೋಪ್ ಹೀರೋಯಿನ್. ಅಭಿಷೇಕ್ ತಮ್ಮ ಮೊದಲ ಸಿನಿಮಾದಲ್ಲಿ ಬೈಕ್ ರೇಸರ್ ಎಂಬ ಗುಟ್ಟನ್ನು ನಿರ್ದೇಶಕ ನಾಗಶೇಖರ್ ಬಿಚ್ಚಿಟ್ಟಿದ್ದರು. ಈಗ ಹೀರೋ ಅಷ್ಟೇ ಅಲ್ಲ, ಹೀರೋಯಿನ್ ಕೂಡಾ ಬೈಕ್ ರೇಸರ್ ಅನ್ನೋದು ಬಹಿರಂಗವಾಗಿದೆ.
ತಾನ್ಯಾ ಹೋಪ್, ಸ್ವತಃ ಡುಕಾಟಿ ಬೈಕ್ ಓಡಿಸೋಕೆ ಕಲಿತಿದ್ದಾರೆ. ಸುಮಾರು 15 ಲಕ್ಷ ರೂಪಾಯಿಯ ಡುಕಾಟಿ 959 ಬೈಕ್‍ನ್ನು ಪಳಗಿಸಿಕೊಂಡಿದ್ದಾರೆ.
ಅಭಿಷೇಕ್ ಚಿತ್ರಕ್ಕೆ ಸರ್ವರೀತಿಯಲ್ಲೂ ಸಜ್ಜಾಗಿದ್ದಾರೆ. ಚಿತ್ರದ ನಾಯಕಿಗೆ ಕೂಡಾ ಬೈಕ್ ರೇಸ್ ಕಲಿಸಬೇಕಿತ್ತು. ಈಗವರನ್ನು ಅದನ್ನು ಕಲಿತುಕೊಂಡೇ ಬಂದಿದ್ದಾರೆ. ಸಿನಿಮಾ ಚೆನ್ನಾಗಿ ಬರುತ್ತಿದೆ ಎಂದಿದ್ದಾರೆ ನಾಗಶೇಖರ್.